ಬೆಳ್ತಂಗಡಿ : ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಅ. 7 ರಂದು ನಡೆಯುವ ಬೆಳ್ತಂಗಡಿ ತಾಲೂಕು ಬಂದ್ನ ಪ್ರಚಾರಾರ್ಥವಾಗಿ ಸೋಮವಾರ ಸೋಮಂದಡ್ಕದಿಂದ ಪೂಂಜಾಲಕಟ್ಟೆಯ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು.ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ವಾಹನಗಳು ಭಾಗವಹಿಸಿದ್ದವು.
ಪೂಂಜಾಲಕಟ್ಟೆಯಲ್ಲಿ ಜಾಥಾ ಸಮಾರೋಪದಲ್ಲಿ ಮಾತನಾಡಿದ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಪುಷ್ಪರಾಜ ಶೆಟ್ಟಿ, ಎತ್ತಿನಹೊಳೆ ಯೋಜನೆ ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು ಕರಾವಳಿಯ ಜನರ ಬದುಕನ್ನು ಕಸಿದುಕೊಳ್ಳುವುದಾಗಿದೆ. ಈ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲವಾಗಿದ್ದು ಕೇವಲ ಸಾವಿರಾರು ಕೋಟಿ ಅಪಹರಿಸುವ ತಂತ್ರ ಮಾತ್ರವಾಗಿದೆ. ಯೋಜನೆಯನ್ನು ವಿರೋಸಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಾಹನ ಜಾಥಾ ಹಮ್ಮಿಕೊಳ್ಳಲಾಗಿದ್ದು ಜನರ ಭಾಗವಹಿಸುವಿಕೆಯಿಂದ ಅತ್ಯಂತ ಯಶಸ್ವಿಯಾಗಿದೆ. ಮುಂದಿನ ಹಂತವಾಗಿ ಅ. 7 ರಂದು ನಡೆಯುವ ತಾಲೂಕು ಬಂದ್ಗೆ ಎಲ್ಲರೂ ಬೆಂಬಲ ನೀಡಬೇಕು. ವಾಹನಗಳನ್ನು ಹಾಗೂ ವ್ಯಾಪಾರ ವ್ಯವಹಾರಗಳನ್ನು ಸ್ವಯಂಪ್ರೇರಿತರಾಗಿ ಸ್ಥಗಿತ ಗೊಳಿಸಿ ಬಂದ್ಗೆ ಬೆಂಬಲ ನೀಡುವಂತೆ ವಿನಂತಿಸಿದರು.
ಸೋಮಂದಡ್ಕದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು ಮಾರ್ಗವಾಗಿ ಜಾಥಾ ಪೂಂಜಾಲಕಟ್ಟೆಯವರೆಗೆ ಸಾಗಿ ಬಂತು. ತಾಲೂಕಿನ ಸುಮಾರು 40 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಸುಮಾರು 300 ಕ್ಕೂ ಅಕ ವಾಹನಗಳು ಜಾಥಾದಲ್ಲಿ ಭಾಗವಹಿಸಿದ್ದವು. ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ ಇದರ ಪದಾಕಾರಿಗಳು, ಸಾರ್ವಜನಿಕರು, ಸಂಘಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಜಾಥಾದಲ್ಲಿ ಧ್ವನಿವರ್ಧಕದ ಮೂಲಕ ಬಂದ್ನ ಬಗ್ಗೆ ಜನರಿಗೆ, ವ್ಯಾಪಾರಸ್ಥರಿಗೆ ಮನವರಿಕೆಯನ್ನು ಮೆರವಣಿಗೆ ಮಾಡುತ್ತಾ ಸಾಗಿಬಂತು. ದಾರಿಯುದ್ದಕ್ಕೂ ಎತ್ತಿನಹೊಳೆ ವಿರೋಧಿಸಿ, ಅದರ ಸಾಧಕ-ಭಾದಕಗಳ ಕರಪತ್ರವನ್ನು ವಿತರಿಸಲಾಯಿತು. ಜಾಥಾದಲ್ಲಿ ದ್ವಿಚಕ್ರ ವಾಹನಗಳು, ಚತುಥ್ಚಕ್ರ ವಾಹನಗಳು ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆ 10 ಗಂಟೆಗೆ ಮುಂಡಾಜೆಯಿಂದ ಜಾಥಾ ಹೊರಟು ಮಧ್ಯಾಹ್ನ 12-30ಕ್ಕೆ ಪುಂಜಾಲಕಟ್ಟೆಗೆ ತಲುಪಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.