ನವದೆಹಲಿ: ತಮ್ಮ ಭೂಪ್ರದೇಶದಲ್ಲಿ ಪಾಕಿಸ್ತಾನಿ ಪ್ರಜೆಗಳ ಕಾನೂನುಬಾಹಿರ ಹತ್ಯೆಗಳಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿ ಪಾಕಿಸ್ತಾನದ ಯುಎನ್ ರಾಯಭಾರಿ ಮುನೀರ್ ಅಕ್ರಂ ಅವರು ಮಾಡಿದ ಭಾರತ ವಿರೋಧಿ ಹೇಳಿಕೆಗಳಿಗೆ ಭಾರತ ತಕ್ಕ ತಿರುಗೇಟು ನೀಡಿದೆ.
ಎಲ್ಲಾ ಆರೋಪಗಳಿಗೆ ಪಾಯಿಂಟ್-ಬೈ ಪಾಯಿಂಟ್ ಮತ್ತು ನೇರವಾದ ಖಂಡನೆ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್ ಅವರು, ಈ ಸವಾಲಿನ ಸಮಯದಲ್ಲಿ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರಯತ್ನಿಸುತ್ತೇವೆ, ನಮ್ಮ ಗಮನವು ರಚನಾತ್ಮಕ ಸಂಭಾಷಣೆಯ ಮೇಲೆ ಸ್ಥಿರವಾಗಿರುತ್ತದೆ, ಆದ್ದರಿಂದ ನಾವು ಒಂದು ನಿರ್ದಿಷ್ಟ ನಿಯೋಗದ ಟೀಕೆಗಳನ್ನು ಬದಿಗಿಡುವ ಆಯ್ಕೆ ಮಾಡುತ್ತೇವೆ, ಇದು ಕೇವಲ ಸಭ್ಯತೆಯ ಕೊರತೆಯನ್ನು ಮಾತ್ರವಲ್ಲದೆ ಅವರ ವಿನಾಶಕಾರಿ ಸ್ವಭಾವವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ.
ನಮ್ಮ ಚರ್ಚೆಗಳಿಗೆ ಯಾವಾಗಲೂ ಮಾರ್ಗದರ್ಶನ ನೀಡುವಂತಹ ಗೌರವ ಮತ್ತು ರಾಜತಾಂತ್ರಿಕತೆಯ ಕೇಂದ್ರ ತತ್ವಗಳಿಗೆ ಬದ್ಧವಾಗಿ ಇರಿ ಎಂದು ನಾವು ಆ ನಿಯೋಗವನ್ನು ಬಲವಾಗಿ ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.
ಅಲ್ಲದೇ ಎಲ್ಲಾ ಅಂಶಗಳ ಬಗ್ಗೆ ಅತ್ಯಂತ ಸಂಶಯಾಸ್ಪದ ದಾಖಲೆಯನ್ನು ಹೊಂದಿರುವ ದೇಶ ಪಾಕಿಸ್ಥಾನ ಎಂದು ವಿಶ್ಲೇಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.