ನವದೆಹಲಿ: ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಈಗಾಗಲೇ ಭಾರತೀಯ ಬಿಲ್ಲುಗಾರರು ಮೂರು ಬಂಗಾದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ತಂಡ, ಮಹಿಳಾ ಮತ್ತು ಮಿಶ್ರ ತಂಡದ ಸ್ಪರ್ಧೆಯಲ್ಲಿ ಬಂಗಾರ ಭಾರತದ ಪಾಲಾಗಿದೆ.
ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಮಹಿಳಾ ತಂಡ ಇಟಲಿಯ ಮಾರ್ಸೆಲ್ಲಾ ಟೋನಿಯೊಲಿ, ಐರಿನ್ ಫ್ರಾಂಚಿನಿ ಮತ್ತು ಎಲಿಸಾ ರೋನರ್ ಅವರನ್ನು 236-225 ಅಂಕಗಳ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಕೇವಲ 4 ಅಂಕಗಳನ್ನು ಕಳೆದುಕೊಂಡ ಮಹಿಳಾ ತಂಡ, 6ನೇ ಶ್ರೇಯಾಂಕದ ಇಟಲಿ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.
ಮತ್ತೊಂದೆಡೆ, ಅಭಿಷೇಕ್ ವರ್ಮಾ, ಪ್ರಿಯಾಂಶ್ ಮತ್ತು ಪ್ರಥಮೇಶ್ ಫುಗೆ ಅವರ ಪುರುಷರ ತಂಡ ನೆದರ್ಲೆಂಡ್ಸ್ನ ಮೈಕ್ ಸ್ಕ್ಲೋಸರ್, ಸಿಲ್ ಪಾಟರ್ ಮತ್ತು ಸ್ಟೆಫ್ ವಿಲ್ಲೆಮ್ಸ್ ವಿರುದ್ಧ ಪ್ರಾಬಲ್ಯವನ್ನು ಪ್ರದರ್ಶಿಸಿದರು ಮತ್ತು 238-231 ರಲ್ಲಿ ಜಯಗಳಿಸಿದರು. ಭಾರತ ಪುರುಷರ ತಂಡ ಕೇವಲ 2 ಅಂಕಗಳನ್ನು ಕಳೆದುಕೊಂಡು ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಬಗ್ಗು ಬಡಿಯಿತು.
ಜ್ಯೋತಿ ಸುರೇಖಾ ವೆನ್ನಮ್ ಮತ್ತು ಅಭಿಷೇಕ್ ವರ್ಮಾ ಜೋಡಿ ಸಂಯುಕ್ತ ಮಿಶ್ರ ತಂಡ ಚಿನ್ನದ ಫೈನಲ್ನಲ್ಲಿ ಎಸ್ಟೋನಿಯಾವನ್ನು 158-157 ರಿಂದ ಸೋಲಿಸುವ ಮೂಲಕ ಭಾರತವು ತಮ್ಮ ಮುಡಿಗೆ 3ನೇ ಚಿನ್ನವನ್ನು ಸೇರಿಸಿತು. 2ನೇ ಶ್ರೇಯಾಂಕದ ಭಾರತೀಯ ಜೋಡಿಯು ತಮ್ಮ ಎಸ್ಟೋನಿಯನ್ ಸಹವರ್ತಿಗಳಿಂದ ತೀವ್ರ ಪೈಪೋಟಿ ಎದುರಿಸಿತು. ಆದರೆ, 158-157 ಗೇಮ್ಗಳನ್ನು ಪಡೆಯಲು ಕೊನೆವರೆಗೂ ತಾಳ್ಮೆ ಕಾಯ್ದುಕೊಂಡರು.
ಎಪ್ರಿಲ್ 28ರಂದು ಭಾರತಕ್ಕೆ ಮತ್ತೆರಡು ಬಂಗಾರದ ಪದಕಗಳು ಲಭಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.