ನವದೆಹಲಿ: ಉದ್ಯೋಗಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆ ಸಾಂವಿಧಾನಿಕ ಕರ್ತವ್ಯವಾಗಿದೆ ಮತ್ತು ಮಹಿಳೆಗೆ ಅದರಲ್ಲೂ ವಿಶೇಷವಾಗಿ ದಿವ್ಯಾಂಗ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಶಿಶುಪಾಲನಾ ರಜೆ (ಸಿಸಿಎಲ್) ನಿರಾಕರಿಸುವುದು ಈ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸುತ್ತದೆ ಎಂಬ ಅಂಶವನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
“ಮಕ್ಕಳ ಆರೈಕೆ ರಜೆ ಪ್ರಮುಖ ಸಾಂವಿಧಾನಿಕ ಉದ್ದೇಶವನ್ನು ಹೊಂದಿದೆ, ಇದರನ್ವಯ ಮಹಿಳೆಯರಿಗೆ ಉದ್ಯೋಗಿಗಳಲ್ಲಿ ಸಮಾನ ಅವಕಾಶವನ್ನು ನಿರಾಕರಿಸುವಂತಿಲ್ಲ. ಶಿಶುಪಾಲನಾ ರಜೆ (ಸಿಸಿಎಲ್)ಯನ್ನು ನಿರಾಕರಿಸುವುದು ತಾಯಿಯನ್ನು ಉದ್ಯೋಗ ತೊರೆಯುವಂತೆ ಮಾಡಬಹುದು, ಇದು ವಿಶೇಷ ಅಗತ್ಯವುಳ್ಳ ಮಗುವನ್ನು ಹೊಂದಿರುವ ತಾಯಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ” ಎಂದು ಕೋರ್ಟ್ ಹೇಳಿದೆ.
ತನ್ನ ದಿವ್ಯಾಂಗ ಮಗುವನ್ನು ನೋಡಿಕೊಳ್ಳಲು ರಜೆ ನಿರಾಕರಿಸಲಾಗಿದೆ ಎಂದು ದೂರಿ ಹಿಮಾಚಲ ಪ್ರದೇಶದ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಾಲಿನಿ ಧರ್ಮಾನಿ ಅವರ ಅರ್ಜಿಯನ್ನು ಆಧರಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಈ ಅನಿಸಿಕೆಯನ್ನು ವ್ಯಕ್ತಪಡಿಸಿದೆ.
ಶಾಲಿನಿ ತಮ್ಮ ಮಗನ ಚಿಕಿತ್ಸೆಗಾಗಿ ಕೇಂದ್ರ ನಾಗರಿಕ ಸೇವಾ ನಿಯಮಗಳ ಅನ್ವಯ ಮಂಜೂರಾದ ಸಿಸಿಎಲ್ ರಜೆಗಳನ್ನು ಖಾಲಿ ಮಾಡಿದ್ದಾರೆ. ಆಕೆಯ ಮಗ ಆನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಮತ್ತು ಹುಟ್ಟಿನಿಂದಲೇ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾನೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.