ನವದೆಹಲಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಇದುವರೆಗೆ ಸುಮಾರು 1.5 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠಾಪನೆ ಮಾಡಿದ ಬಳಿಕ ಸುಮಾರು 1.5 ಕೋಟಿ ಜನರು ರಾಮಲಲಾನ ದರ್ಶನಕ್ಕೆ ಬಂದಿದ್ದಾರೆ ಎಂದರು.
ಪ್ರಸ್ತುತ ಮಂದಿರದ ನೆಲ ಮಹಡಿ ಮಾತ್ರ ಪೂರ್ಣಗೊಂಡಿದೆ. ಮೊದಲ ಅಂತಸ್ತಿನ ಕೆಲಸ ಇನ್ನೂ ನಡೆಯುತ್ತಿದೆ. ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆ ನಿರ್ಮಿಸಲಾಗುವುದು. ಈ ಗೋಡೆಯನ್ನು ದೇವಾಲಯದ ‘ಪರ್ಕೋಟ’ ಎಂದು ಕರೆಯಲಾಗುತ್ತದೆ. ‘ಪರ್ಕೋಟ’ ಬಹುಪಯೋಗಿಯಾಗಿದ್ದು, ಅಲ್ಲಿ ಇನ್ನೂ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ಅದು ಭಗವಾನ್ ಶಂಕರ, ಭಗವಾನ್ ಸೂರ್ಯ, ‘ಗರ್ಭಗೃಹ’ ಮತ್ತು ಎರಡು ತೋಳುಗಳಲ್ಲಿ, ಭಗವಾನ್ ಹನುಮಾನ್ ಮತ್ತು ಮಾ ಅನ್ನಪೂರ್ಣ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
#WATCH | Ayodhya, Uttar Pradesh: General Secretary of Shri Ram Janmabhoomi Teerth Kshetra, Champat Rai says, "Only the ground floor of the temple is completed where the 'Pran Pratistha' of Ram Lalla was done, the work of the first floor is going on. A security wall of width 14 ft… pic.twitter.com/9lwBwJGWMa
— ANI (@ANI) April 22, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.