ಬೆಂಗಳೂರು: ಕರ್ನಾಟಕ ರಾಜ್ಯವು ಜಿಹಾದಿಗಳ ಕರ್ನಾಟಕವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಆರೋಪ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಕಗ್ಗೊಲೆ, ಹಿಂದೂಗಳಿಗೆ ಅವಮಾನ, ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಭಯೋತ್ಪಾದನಾ ದುಷ್ಕøತ್ಯಗಳು ಕಾಂಗ್ರೆಸ್ಸಿನವರನ್ನೂ ಬಿಟ್ಟಿಲ್ಲ ಎಂದು ವಿಶ್ಲೇಷಿಸಿದರು.
ಹುಬ್ಬಳ್ಳಿಯಲ್ಲಿ ಆದ ಘಟನೆ ಕರ್ನಾಟಕವೇ ತಲೆತಗ್ಗಿಸುವಂಥ ಕೃತ್ಯ. ಸುರಕ್ಷಿತ ಪ್ರದೇಶ, ಕಾಲೇಜಿನ ಆವರಣದಲ್ಲೇ ಮತಾಂಧ ಮುಸ್ಲಿಂ ಯುವಕ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯನ್ನು ಬರ್ಬರವಾಗಿ ಚುಚ್ಚಿ, ಚುಚ್ಚಿ ಕೊಂದಿರುವುದನ್ನು ಕರ್ನಾಟಕ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನೀವು ಫ್ಲ್ಯಾಟ್ಗಳಲ್ಲಿ ವಾಸಿಸುತ್ತಿದ್ದರೆ ಇನ್ನು ಮುಂದೆ ಅಲ್ಲಿ ವಾಸಿಸಬೇಡಿ. ಕುಡಿಯುವ ನೀರು ಬೇಕಿದ್ದರೆ ಕಾಂಗ್ರೆಸ್ಸಿಗೆ ಮತ ಕೊಡಿ ಎಂದು ಧಮ್ಕಿಯಲ್ಲೇ ಜೀವನಪೂರ್ತಿ ಕಳೆದ ಕಾಂಗ್ರೆಸ್ಸಿನ ನೇತಾರ ಡಿ.ಕೆ.ಶಿವಕುಮಾರ ಅವರು ಹೇಳಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ನಿಮಗೆ ಜನರು ಅಧಿಕಾರ ಕೊಟ್ಟಿದ್ದಾರೆ. ಹಣ ಎಲ್ಲಿಂದ ಎಂದು ಜನರು ಕೇಳುವುದಿಲ್ಲ. ಬರ ನಿರ್ವಹಣೆಯಲ್ಲಿ ನೀವು ಸಂಪೂರ್ಣ ವೈಫಲ್ಯರಾಗಿದ್ದೀರಿ ಎಂದು ಟೀಕಿಸಿದರು.
2013ರಿಂದ 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಸರಕಾರವೇ ಇತ್ತು. ಆಗ 3,600 ರೈತರ ಆತ್ಮಹತ್ಯೆ ಆಗಿತ್ತು. ಆ ಕಡೆ ಸಿದ್ದರಾಮಯ್ಯನವರು ತಿರುಗಿಯೂ ನೋಡಲಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ವೇಳೆ ಪತ್ರಕರ್ತರು ಮಂಡ್ಯದಲ್ಲಿ ಆತ್ಮಹತ್ಯೆ ಕುರಿತು ಪ್ರಶ್ನಿಸಿದರೆ, ಕೇರ್ ಮಾಡದೆ ಹೋದವರು ನೀವು. ನಿಮ್ಮದು ರೈತವಿರೋಧಿ ಸರಕಾರ. ಈ ವರ್ಷ 692 ರೈತರ ಆತ್ಮಹತ್ಯೆ ಆಗಿದೆ. ಸರಣಿಯಂತೆ ಆಗುತ್ತಿದ್ದರೂ ನೀವು ತಲೆ ಕೆಡಿಸಿಕೊಂಡಿಲ್ಲ ಎಂದು ಆರ್. ಅಶೋಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರ 6 ಸಾವಿರ, ರಾಜ್ಯ ಸರಕಾರ 4 ಸಾವಿರ ಕೊಡುತ್ತಿತ್ತು. ಇವತ್ತು ಕೇಂದ್ರ ಸರಕಾರದ ಹಣ ಬರುತ್ತಿದೆ. ರಾಜ್ಯ ಸರಕಾರದ ಹಣಕ್ಕೆ ಕಲ್ಲು ಹಾಕಿದ್ದಾರೆ. ರೈತರು ಆತ್ಮಹತ್ಯೆ ಅಲ್ಲದೆ ಇನ್ನೇನು ಮಾಡಲು ಸಾಧ್ಯ? ಎಂದು ಕೇಳಿದರು. ಸಿದ್ದರಾಮಯ್ಯನವರ ಸರಕಾರ ಒಂದು ರೀತಿ ಶಾಪವಾಗಿ ಮೃತ್ಯುವಿನ ದಾರಿ ತೋರಿಸುತ್ತಿರುವುದು ಶೋಚನೀಯ ಎಂದು ಟೀಕಿಸಿದರು.
ಕ್ರೂರ, ಹೃದಯಹೀನ ಬಂಡೆ ಸರಕಾರ ಇದು ಎಂದು ದೂರಿದರು. ಸರಕಾರದ ಮೃದು ಧೋರಣೆಯಿಂದ ಭಯೋತ್ಪಾದಕರ ಅಟ್ಟಹಾಸ ಇಡೀ ಕರ್ನಾಟಕದಲ್ಲಿ ಮೇರೆಮೀರಿ ನಡೆಯುತ್ತಿದೆ. ಮಚ್ಚು, ಲಾಂಗುಗಳನ್ನು ಮೋಟರ್ ಬೈಕಿನಲ್ಲಿ ಇಟ್ಟುಕೊಂಡು ಬೀದಿ ಬೀದಿಗಳಲ್ಲಿ ಝಳಪಿಸಿ ಓಡಾಡುತ್ತಿದ್ದಾರೆ. ಇದನ್ನು ಜನರು ಎಲ್ಲ ಮಾಧ್ಯಮಗಳಲ್ಲಿ ನೋಡುತ್ತಿದ್ದಾರೆ. ಲವ್ ಜಿಹಾದ್, ಜೈಶ್ರೀರಾಂ ಎನ್ನುವವರ ಮೇಲಿನ ಹಲ್ಲೆ, ಭಯೋತ್ಪಾದನೆ, ಕೊಲೆ ತಡೆಯಲು ಸರಕಾರಕ್ಕೆ ಸಾಧ್ಯವಿಲ್ಲ. ಆದ್ದರಿಂದ ಜನರು ತಮ್ಮ ರಕ್ಷಣೆಯನ್ನು ಅವರೇ ನೋಡಿಕೊಳ್ಳಬೇಕೆಂದು ಸಿದ್ದರಾಮಯ್ಯನವರ ಸರಕಾರ ಹೇಳಲಿ ಎಂದು ಆಗ್ರಹಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮಿಂದ ಅಸಾಧ್ಯ ಎಂದು ಹೇಳಿಬಿಡಿ ಎಂದು ಒತ್ತಾಯಿಸಿದರು.
ಒಂದು ಫ್ಲ್ಯಾಟ್ ಮೇಲೆ ಡೆವಲಪರ್ಗಳು 7ರಿಂದ 10 ಕೋಟಿ ಕಾಂಗ್ರೆಸ್ ಟ್ಯಾಕ್ಸ್ ಕಟ್ಟಬೇಕಾಗಿದೆ. ಕರ್ನಾಟಕದ ಭ್ರಷ್ಟ, ಲೂಟಿ ಮಾಡುವ ಸರಕಾರವು ಇದನ್ನು ಜಾರಿ ಮಾಡಿದೆ. ಗ್ಯಾರಂಟಿ 2 ಸಾವಿರವನ್ನು ಸಿದ್ದರಾಮಯ್ಯನವರ ಜೇಬಿನಿಂದ ಕೊಡುತ್ತಿಲ್ಲ, ಡಿ.ಕೆ.ಶಿವಕುಮಾರ್ ಕೈಯಿಂದ ಕೊಡುತ್ತಿಲ್ಲ, ರಾಹುಲ್ ಗಾಂಧಿಯವರ ಮನೆಯಿಂದ ಕೊಡುತ್ತಿಲ್ಲ ಎಂದು ಜನರಿಗೂ ಅರ್ಥವಾಗಿದೆ. ಹಾಲಿನ ಮೇಲೆ 3 ರೂ., ಎಣ್ಣೆ ಮೇಲೆ ಕ್ವಾರ್ಟರ್ಗೆ 60 ರೂ., ಇಲೆಕ್ಟ್ರಿಸಿಟಿ ಬಿಲ್ ಹೆಚ್ಚಳ, ಮನೆ ತೆರಿಗೆ, ಸ್ಟ್ಯಾಂಪ್ ಮನೆ ರಿಜಿಸ್ಟ್ರೇóಶನ್ ಶೇ 250 ಜಾಸ್ತಿ ಮಾಡಿದ್ದಾರೆ. ಒಂದೊಂದು ಮನೆಗೆ 5 ಸಾವಿರ ಬರುವಂತೆ ಮಾಡಿದ್ದಾರೆ ಎಂದು ಟೀಕಿಸಿದರು. ಇದರಲ್ಲಿ 2 ಸಾವಿರ ಫಲಾನುಭವಿಗೆ, 3 ಸಾವಿರವನ್ನು ಚುನಾವಣೆಗೆ ಕಳಿಸುತ್ತಿದ್ದಾರೆ ಎಂದು ಪ್ರಧಾನಿಯವರೇ ಹೇಳಿದ್ದಾರೆ ಎಂದು ವಿವರಿಸಿದರು.
ಕಳೆದ 11 ತಿಂಗಳಲ್ಲಿ ಕುಡಿಯುವ ನೀರು, ಶಾಲೆ, ಆಸ್ಪತ್ರೆ ಸೇರಿ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಯೋಜನೆಗಳಿಗೆ ನೀವು ಖರ್ಚು ಮಾಡಿದ ಹಣವೆಷ್ಟು? ನಮ್ಮ ಸರಕಾರ ಕೊಟ್ಟ, ಪ್ರಾರಂಭಿಸಿದ ಯೋಜನೆಗಳಲ್ಲಿದೆ ನೀವು ಹೊಸದಾಗಿ ಆರಂಭಿಸಿದ ಯೋಜನೆಗಳ ವಿವರ ಕೊಡಿ, ದಾಖಲೆಗಳನ್ನು ಚುನಾವಣೆ ಮುಂಚೆ ಇಡಬೇಕು ಎಂದು ಆಗ್ರಹಿಸಿದರು. 11 ತಿಂಗಳಲ್ಲಿ ಪ್ರಾರಂಭ ಮಾಡಿದ ನೀರಾವರಿ ಯೋಜನೆಗಳು ವಿವರ ಕೊಡಬೇಕು ಎಂದು ಒತ್ತಾಯಿಸಿದರು. ಎಷ್ಟು ಲಕ್ಷ ನೀರಾವರಿ ಮಾಡಿಸಿದ್ದೀರಿ ಎಂದು ಕೇಳಿದರು.
ರೈಲ್ವೆ, ರಸ್ತೆ ಸೇರಿ ಮೂಲಸೌಕರ್ಯಕ್ಕೆ ಹಿಂದಿನ ಯುಪಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ ಎಷ್ಟು ಹಣ ಬಂದಿದೆ. ಮೋದಿಯವರ ಸರಕಾರದಿಂದ ಎಷ್ಟು ಹಣ ಬಿಡುಗಡೆ ಆಗಿದೆ ಎಂದು ಲೆಕ್ಕ ಕೊಡಿ ಎಂದು ಅವರು ಸವಾಲೆಸೆದರು. ಕಾಂಗ್ರೆಸ್ ಪಕ್ಷ 50 ವರ್ಷದಲ್ಲಿ ಏನು ಮಾಡಿದೆಯೋ ಅದನ್ನು ಗಡ್ಕರಿಯವರು ಕೇವಲ 5 ವರ್ಷಗಳಲ್ಲೇ ಮಾಡಿದ್ದಾರೆ ಎಂದು ವಿವರಿಸಿದರು.
ಶಾಸಕರಾದ ಉದಯ ಗರುಡಾಚಾರ್, ಎಸ್. ಮುನಿರಾಜು, ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.