ಅಮ್ರೋಹಾ: ಈ ವರ್ಷದ ಆರಂಭದಲ್ಲಿ ಗುಜರಾತ್ನ ದ್ವಾರಕಾದಲ್ಲಿ ನಾನು ನೀರೊಳಗೆ ನಡೆಸಿದ ಧ್ಯಾನವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇವಲ ತಮ್ ವೋಟ್ ಬ್ಯಾಂಕ್ ಅನ್ನು ಒಲಿಸಿಕೊಳ್ಳುವುದಕ್ಕಾಗಿ ಅಪಹಾಸ್ಯ ಮಾಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ನ ಶೆಹಜಾದಾ’ ಎನ್ನುವ ಮೂಲಕ ರಾಹುಲ್ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಪುರಾತತ್ವಶಾಸ್ತ್ರಜ್ಞರು ಸಮುದ್ರದಲ್ಲಿ ದ್ವಾರಕಾವನ್ನು ಕಂಡುಕೊಂಡಿದ್ದಾರೆ. ನಾನು ನೀರಿನ ಅಡಿಯಲ್ಲಿ ಹೋಗಿ ದ್ವಾರಕಾದಲ್ಲಿ ಪೂಜೆಯನ್ನು ಮಾಡಿದೆ. ಆದರೆ ಕಾಂಗ್ರೆಸ್ನ ಶೆಹಜಾದಾ ಸಾಗರದಲ್ಲಿ ಪ್ರಾರ್ಥಿಸಲು ಯೋಗ್ಯವಾದದ್ದೇನೂ ಇಲ್ಲ ಎಂದು ಹೇಳುತ್ತಾರೆ. ಈ ಜನರು ಕೇವಲ ತಮ್ಮ ಮತ ಬ್ಯಾಂಕ್ಗಾಗಿ ನಮ್ಮ ಸಂಸ್ಕೃತಿ, ಸಾವಿರಾರು ವರ್ಷಗಳ ಹಿಂದಿನ ನಂಬಿಕೆಗಳನ್ನು ತಿರಸ್ಕರಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರ ಮಿತ್ರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
“ಬಿಹಾರದಲ್ಲಿ ತಮ್ಮನ್ನು ಯದುವಂಶಿ ಎಂದು ಕರೆದುಕೊಳ್ಳುವವರನ್ನು ನಾನು ಕೇಳಲು ಬಯಸುತ್ತೇನೆ, ನೀವು ನಿಜವಾದ ಯದುವಂಶಿಯಾಗಿದ್ದರೆ, ದ್ವಾರಕಾವನ್ನು ಅವಮಾನಿಸುವ ಪಕ್ಷದೊಂದಿಗೆ ನೀವು ಹೇಗೆ ಕುಳಿತಿದ್ದೀರಿ” ಎಂದು ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.