ನವದೆಹಲಿ: ಇಸ್ರೇಲ್ ಇರಾನಿನ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಲಾರಂಭಿಸಿದ ಹಿನ್ನೆಲೆಯಲ್ಲಿ ಇರಾನ್ ಇಂದು ಬೆಳಿಗ್ಗೆ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ಇರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಕ್ಷಿಪಣಿ ಉಡಾವಣೆ ಮಾಡಿದೆ ಎಂದು ಯುಎಸ್ ಅಧಿಕಾರಿಯನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್ ವರದಿ ಮಾಡಿದೆ. ಇಸ್ಫಹಾನ್ ಎಂಬಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಡಮಾಸ್ಕಸ್ನಲ್ಲಿನ ತನ್ನ ರಾಯಭಾರ ಕಛೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಇತ್ತೀಚಿಗೆ ಇಸ್ರೇಲ್ ಮೇಲೆ ಕ್ಷಿಪಣಿ ಉಡಾವಣೆ ಮಾಡಿತ್ತು, ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ದಾಳಿ ನಡೆಸಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.
ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಹಲವಾರು ನಗರಗಳಲ್ಲಿ ಸಕ್ರಿಯಗೊಳಿಸಿದೆ ಎಂದು ದೇಶದ ಅಧಿಕೃತ ವಕ್ತಾರರು ಹೇಳಿದ ನಂತರ, ಕೇಂದ್ರ ನಗರವಾದ ಇಸ್ಫಹಾನ್ ಬಳಿ ಸ್ಫೋಟಗಳು ಕೇಳಿಬಂದವು ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ಇರಾನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮದ ಕೇಂದ್ರಭಾಗವಾದ ನಟಾನ್ಜ್ ಸೇರಿದಂತೆ ಹಲವಾರು ಇರಾನಿನ ಪರಮಾಣು ತಾಣಗಳು ಇಸ್ಫಹಾನ್ ಪ್ರಾಂತ್ಯದಲ್ಲಿ ನೆಲೆಗೊಂಡಿವೆ.
ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿದ್ದರೂ, ಇರಾನ್ ಮಾತ್ರ ದಾಳಿ ನಡೆದಿಲ್ಲ, ತಾಣು ಹಲವಾರು ಡ್ರೋನ್ಗಳನ್ನು ಹೊಡೆದುಹಾಕಿದ್ದಾಗಿ ಹೇಳಿಕೊಂಡಿದೆ.
“ಹಲವಾರು ಡ್ರೋನ್ಗಳನ್ನು ದೇಶದ ವಾಯು ರಕ್ಷಣೆಯಿಂದ ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ, ಸದ್ಯಕ್ಕೆ ಕ್ಷಿಪಣಿ ದಾಳಿಯ ಯಾವುದೇ ವರದಿಗಳಿಲ್ಲ” ಎಂದು ಇರಾನ್ನ ಬಾಹ್ಯಾಕಾಶ ಸಂಸ್ಥೆಯ ವಕ್ತಾರ ಹೊಸೈನ್ ಡೇಲಿರಿಯನ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ‘ಈ ಸಮಯದಲ್ಲಿ ಪ್ರತಿಕ್ರಿಯೆ ನೀಡಬೇಡಿ’ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಡೇಟಾಬೇಸ್ನಲ್ಲಿ ಪೋಸ್ಟ್ ಮಾಡಲಾದ ಏರ್ಮೆನ್ಗಳಿಗೆ ಸೂಚನೆಯ ಪ್ರಕಾರ ಟೆಹ್ರಾನ್ನ ಇಮಾಮ್ ಖೊಮೇನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.