ನವದೆಹಲಿ: ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ನರೇಂದ್ರ ಮೋದಿ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇರಾನ್ ವಶಪಡಿಸಿಕೊಂಡ ಇಸ್ರೇಲ್ ಮೂಲದ ಸರಕು ಹಡಗಿನಲ್ಲಿದ್ದ 17 ಭಾರತೀಯ ಸಿಬ್ಬಂದಿಯ ಪೈಕಿ ಒಬ್ಬರಾಗಿದ್ದ ಮಹಿಳೆ ಕೊನೆಗೂ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ತ್ರಿಶೂರ್ನ ಭಾರತೀಯ ಡೆಕ್ ಕೆಡೆಟ್ ಆಂಟೆಸ್ಸಾ ಜೋಸೆಫ್ ಗುರುವಾರ ಮಧ್ಯಾಹ್ನ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದರು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಟೆಹ್ರಾನ್ನಲ್ಲಿರುವ ಭಾರತೀಯ ಮಿಷನ್ ಈ ವಿಷಯವನ್ನು ಖಚಿತಪಡಿಸಿದೆ ಮತ್ತು ಕಂಟೇನರ್ ಹಡಗಿನ ಉಳಿದ 16 ಭಾರತೀಯ ಸಿಬ್ಬಂದಿಗಳೊಂದಿಗೂ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಸಿಬ್ಬಂದಿಯ ಸದಸ್ಯರು ಉತ್ತಮ ಆರೋಗ್ಯ ಹೊಂದಿದ್ದಾರೆ ಮತ್ತು ಭಾರತದಲ್ಲಿನ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ”ಎಂದು ಅದು ಹೇಳಿದೆ.
“ಎಂಎಸ್ಸಿ ಏರೀಸ್ನ ಉಳಿದ ಸಿಬ್ಬಂದಿ ಸದಸ್ಯರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಮಿಷನ್ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.