ವಡೋದರಾ: ಬಿಸಿಲ ಬೇಗೆ ವಿಪರೀತವಾಗುತ್ತಿದ್ದು, ಜನರು ಹೊರ ಬರಲು ಹಿಂದು ಮುಂದು ನೋಡುವ ಪರಿಸ್ಥಿತಿ ಉದ್ಭವವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಟ್ಟಡ ಕಾರ್ಮಿಕರು, ಸಂಚಾರಿ ಪೊಲೀಸರು, ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ಮನಕಲಕುತ್ತದೆ.
ಈ ನಡುವೆ ಬೇಸಿಗೆಯ ತಾಪದಿಂದ ತಪ್ಪಿಸಿಕೊಳ್ಳಲು ವಡೋದರಾ ಸಂಚಾರಿ ಪೊಲೀಸರು ಪರಿಹಾರ ಕಂಡುಕೊಂಡಿದ್ದಾರೆ. ಬಿಸಿಲಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಿಬ್ಬಂದಿಗೆ ವಿಶೇಷ ಹವಾನಿಯಂತ್ರಿತ ಹೆಲ್ಮೆಟ್ಗಳನ್ನು ಪರಿಚಯಿಸಲಾಗಿದೆ. ಈ ನವೀನ AC ಹೆಲ್ಮೆಟ್ಗಳನ್ನು 40-42 ಡಿಗ್ರಿ ಸೆಲ್ಸಿಯಸ್ನ ಗರಿಷ್ಠ ತಾಪಮಾನದಲ್ಲಿ ಕೂಲಿಂಗ್ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಲ್ಮೆಟ್ಗಳು ವಿವಿಧ ವಿಶೇಷ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿವೆ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಮುಖವಾಡ ಮತ್ತು ಚಾರ್ಜಿಂಗ್ ಪಾಯಿಂಟ್ ಅನ್ನು ಹೊಂದಿದೆ. ಪೂರ್ಣ ಚಾರ್ಜ್ ಮಾಡಿದರೆ ಈ ಹೆಲ್ಮೆಟ್ಗಳು ಎಂಟು ಗಂಟೆಗಳವರೆಗೆ ತಂಪು ಒದಗಿಸುತ್ತವೆ.
ಬಿಸಿಗೆ ಸಂಚಾರಿ ಸಿಬ್ಬಂದಿ ರಸ್ತೆಯಲ್ಲೇ ಮೂರ್ಛೆ ಹೋದ ನಿದರ್ಶನಗಳಿವೆ, ಈ ಕಾರಣದಿಂದ ಎಸಿ ಹೆಲ್ಮೆಟ್ ಅನ್ನು ಪರಿಚಯಿಸಲಾಗಿದೆ. ಪ್ರಾಯೋಗಿಕ ಆಧಾರದ ಮೇಲೆ ಈ ಹೆಲ್ಮೆಟ್ಗಳನ್ನು ಪಡೆದ ಸಂಚಾರ ಪೊಲೀಸ್ ಸಿಬ್ಬಂದಿ, ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅವುಗಳ ಪ್ರಯೋಜನದ ಬಗ್ಗೆ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.