ನವದೆಹಲಿ: ಉಭಯ ದೇಶಗಳ ನಡುವಿನ ಹದಗೆಟ್ಟ ರಾಜತಾಂತ್ರಿಕ ಸಂಬಂಧಗಳ ನಡುವೆ ಮಾಲ್ಡೀವ್ಸ್ಗೆ ಆಗಮಿಸುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ ದ್ವೀಪ ರಾಷ್ಟ್ರದ ಪ್ರಮುಖ ಪ್ರವಾಸೋದ್ಯಮ ಸಂಸ್ಥೆಯು ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಭಾರತೀಯ ನಗರಗಳಾದ್ಯಂತ ರೋಡ್ಶೋಗಳನ್ನು ನಡೆಸುವುದಾಗಿ ಘೋಷಿಸಿದೆ.
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಮಾಲ್ಡೀವ್ಸ್ ಸಚಿವರು ಸೇರಿದಂತೆ ಕೆಲವರು ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿ ಟ್ವಿಟ್ ಮಾಡಿದ್ದರು. ಇದರಿಂದ ಕೆರಳಿದ ಭಾರತೀಯರು ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನವನ್ನು ಆರಂಭಿಸಿದ್ದರು. ಅಲ್ಲಿಂದ ಭಾರತೀಯರು ಮಾಲ್ಡೀವ್ಸ್ಗೆ ತೆರಳುವ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
ರೋಡ್ಶೋಗಳನ್ನು ನಡೆಸುವುದು ಸೇರಿದಂತೆ ಪ್ರಯಾಣ ಮತ್ತು ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸುವ ಯೋಜನೆಗಳನ್ನು ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಆಂಡ್ ಟೂರ್ ಆಪರೇಟರ್ಸ್ (MATATO) ಮಾಲೆಯಲ್ಲಿನ ಭಾರತೀಯ ಹೈಕಮಿಷನರ್ ಅವರೊಂದಿಗೆ ಏಪ್ರಿಲ್ 8 ರಂದು ಚರ್ಚೆ ನಡೆಸಿದ ನಂತರ ಘೋಷಿಸಿತು.
“ಪ್ರವಾಸೋದ್ಯಮ ಉಪಕ್ರಮಗಳನ್ನು ಉತ್ತೇಜಿಸಲು ಮಾಲ್ಡೀವ್ಸ್ನಲ್ಲಿರುವ ಭಾರತೀಯ ಹೈಕಮಿಷನ್ನೊಂದಿಗೆ ನಿಕಟವಾಗಿ ಸಹಕರಿಸುವ ಉದ್ದೇಶವನ್ನು MATATO ವ್ಯಕ್ತಪಡಿಸಿದೆ. ಮುಂಬರುವ ತಿಂಗಳುಗಳಲ್ಲಿ ಮಾಲ್ಡೀವ್ಸ್ಗೆ ಪ್ರಭಾವಿ ಮತ್ತು ಮಾಧ್ಯಮ ಪರಿಚಿತ ಪ್ರವಾಸಗಳಿಗೆ ಅನುಕೂಲವಾಗುವಂತೆ ಭಾರತದ ಪ್ರಮುಖ ನಗರಗಳಾದ್ಯಂತ ಸಮಗ್ರ ರೋಡ್ಶೋವನ್ನು ಪ್ರಾರಂಭಿಸಲು ಯೋಜನೆಗಳು ನಡೆಸುತ್ತಿದೆ” ಎಂದು ಪ್ರವಾಸೋದ್ಯಮ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.