ನವದೆಹಲಿ: ಲಡಾಖ್ನ ಮುಂಚೂಣಿ ಘಟಕದ ಸ್ಥಳದಲ್ಲಿ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ ತನ್ನ ಕೈಯನ್ನು ತುಂಡರಿಸಿಕೊಂಡ ಭಾರತೀಯ ಸೇನಾ ಯೋಧನನ್ನು ಭಾರತೀಯ ವಾಯುಪಡೆಯ (ಐಎಎಫ್) ಯಶಸ್ವಿ ಮತ್ತು ಸಮಯೋಚಿತ ಏರ್ಲಿಫ್ಟ್ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ.
ಕಗ್ಗತ್ತಲಿನ ರಾತ್ರಿಯಲ್ಲಿ ಕಠಿಣ ಪ್ರದೇಶದಿಂದ ತ್ವರಿತ ಏರ್ಲಿಫ್ಟ್ ಮಾಡಿದ ಕಾರಣ ಯೋಧನ ಕೈ ಉಳಿದುಕೊಂಡಿದೆ. ಇದಕ್ಕಾಗಿ ವಾಯುಸೇನೆಗೆ
ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ತಂಡ ನಡೆಸಿದ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಯೋಧನ ‘ಕೈ’ ಉಳಿದುಕೊಂಡಿದೆ ಮತ್ತು ಈಗ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ.
“ಯಂತ್ರವನ್ನು ನಿರ್ವಹಿಸುವಾಗ ಭಾರತೀಯ ಸೇನೆಯ ಸಿಬ್ಬಂದಿಯೊಬ್ಬರ ಕೈ ತುಂಡಾಯಿತು. ಅವರ ಕೈಯವನ್ನು ಉಳಿಸಲು ತುರ್ತು ಶಸ್ತ್ರಚಿಕಿತ್ಸೆಗಾಗಿ 6 ರಿಂದ 8 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯಿತು, IAF C-130J ವಿಮಾನವನ್ನು ಬಳಸಿ ಒಂದು ಗಂಟೆಯೊಳಗೆ ದೆಹಲಿ ಅವರನ್ನು ಕರೆತರಲಾಯಿತು” ಎಂದು IAF ಹೇಳಿದೆ.
“ಐಎಎಫ್ ಡಾರ್ಕ್ ನೈಟ್ ಏರ್ಲಿಫ್ಟ್ ಮೂಲಕ ಯೋಧನನ್ನು ಲಡಾಖ್ ಸೆಕ್ಟರ್ನಿಂದ ದೆಹಲಿಗೆ ತ್ವರಿತವಾಗಿ ರವಾನಿಸಿದ ಕಾರಣ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯವಾಯಿತು. ವೈದ್ಯಕೀಯ ಸಿಬ್ಬಂದಿಗಳ ಸಮರ್ಪಿತ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು ಮತ್ತು ಯೋಧ ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ” ಎಂದು ವೈದ್ಯರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.