ನವದೆಹಲಿ: ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ತಮ್ಮ ದೇಶವು ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ. “ಇಸ್ರೇಲಿ ಪ್ರದೇಶದ ಮೇಲೆ ನೇರವಾಗಿ ಇರಾನ್ ದಾಳಿ ಮಾಡಿದರೆ ಅದರ ವಿರುದ್ಧ ಸೂಕ್ತ ಪ್ರತಿಕ್ರಿಯೆ ಇಸ್ರೇಲ್ ನೀಡಲಿದೆ” ಎಂದು ಗ್ಯಾಲಂಟ್ ಗುರುವಾರದಂದು ದೂರವಾಣಿ ಚರ್ಚೆಯ ಸಂದರ್ಭದಲ್ಲಿ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೆ ತಿಳಿಸಿದರು.
ಗ್ಯಾಲಂಟ್ ಇಸ್ರೇಲ್ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು ಮತ್ತು ತನ್ನ ನೆಲದ ಮೇಲೆ ಯಾವುದೇ ಇರಾನಿನ ಆಕ್ರಮಣವನ್ನು ಸಹಿಸುವುದಿಲ್ಲ ಎಂದು ಒತ್ತಿ ಹೇಳಿದರು.
ಏಪ್ರಿಲ್ 1 ರಂದು ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಏಳು ಇರಾನಿಯನ್ನರ ಸಾವು ಸಂಭವಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಶೀಘ್ರದಲ್ಲೇ ಪ್ರತೀಕಾರದ ದಾಳಿಯನ್ನು ನಡೆಸಬಹುದು ಎಂದು ಯುಎಸ್ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡುತ್ತಿವೆ.
ಅದೇ ದಿನ, ಯುಎಸ್ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಮೈಕೆಲ್ ಕುರಿಲ್ಲಾ ಇಸ್ರೇಲ್ಗೆ ಬಂದಿಳಿದಿದ್ದು. ಸಂಭಾವ್ಯ ಇರಾನಿನ ಆಕ್ರಮಣಕ್ಕೆ ಪ್ರತಿಕ್ರಿಯೆಗಳನ್ನು ಸಂಘಟಿಸುವ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಗ್ಯಾಲಂಟ್ ಮತ್ತು ಹರ್ಜಿ ಹಲೇವಿ ಅವರು ಕುರಿಲ್ಲಾ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.