ನವದೆಹಲಿ: ಮಾಜಿ ಶಾಸಕ ಮತ್ತು ಸಾಮಾಜಿಕ ಕಾರ್ಯಕರ್ತ ಜಿತೇಂದರ್ ಸಿಂಗ್ ಶುಂಟಿ ಅವರು ಬುಧವಾರ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಫೋನ್ ಕರೆಯನ್ನು ನೆನಪಿಸಿಕೊಂಡಿದ್ದಾರೆ ಮತ್ತು ಮೋದಿಯವರ ಶ್ಲಾಘನೆಯ ಮಾತುಗಳು ಹೆಚ್ಚು ಸಾಮಾಜಿಕ ಸೇವೆ ಮಾಡಲು ಹೇಗೆ ಪ್ರೇರೇಪಿಸಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮೋದಿ ಸ್ಟೋರಿ ಎಂಬ X ಹ್ಯಾಂಡಲ್, ಸಾಂಕ್ರಾಮಿಕ ಸಮಯದಲ್ಲಿ ನನ್ನ ನಿಸ್ವಾರ್ಥ ಕೆಲಸಕ್ಕಾಗಿ ಬೆಳಿಗ್ಗೆ 2.30ಕ್ಕೆ ಮೋದಿಯಿಂದ ಫೋನ್ ಕರೆಯನ್ನು ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತನ ಕಥೆಯನ್ನು ಹಂಚಿಕೊಂಡಿದೆ.
ಸಾಂಕ್ರಾಮಿಕ ಸಮಯದ ತಮ್ಮ ಅನುಭವಗಳನ್ನು ಹಂಚಿಕೊಂಡ ಶುಂಟಿ, ಸೀಮಾಪುರಿ ಸ್ಮಶಾನದಲ್ಲಿ ಪ್ರತಿದಿನ ನೂರಾರು ಶವಗಳನ್ನು ಸ್ವೀಕರಿಸಲಾಗುತ್ತಿತ್ತು, ಅನಾಥ ದೇಹಗಳನ್ನು ಸುಡುತ್ತಿದ್ದ ಕಾರಣ 21 ದಿನಗಳವರೆಗೆ ಮನೆಗೆ ಹೋಗಲು ನನಗೆ ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಅಲ್ಲದೇ ಸ್ಮಶಾನಕ್ಕೆ ಹೋಗಿ ಬಂದು ಮಾಡುತ್ತಿರುವುದಕ್ಕೆ ನೆರೆಹೊರೆಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು, ಅವರಿಗೆ ಸಾಂಕ್ರಾಮಿಕ ಹರಡುವ ಭೀತಿ ಇತ್ತು ಎಂದಿದ್ದಾರೆ.
ನಾನು ಸ್ಮಶಾನದಲ್ಲಿ 2.30 AM ಗೆ ಅಂತಿಮ ವಿಧಿಗಳನ್ನು ನಡೆಸುತ್ತಿದ್ದಾಗ ಡ್ರೈವರ್ ಬಂದು, “ಸರ್, ನಿಮಗಾಗಿ ಒಂದು ಫೋನ್ ಕರೆ ಬಂದಿದೆ ಮತ್ತು ಕರೆ ಮಾಡಿದವರು ಪ್ರಧಾನ ಮಂತ್ರಿ ಕಚೇರಿಯಿಂದ ಎಂದು ಹೇಳುತ್ತಿದ್ದಾರೆ” ಎಂದರು. “ನನ್ನ ಕೈಗಳು ಕೊಳಕಾಗಿದೆ, ನೀವು ಫೋನ್ ಅನ್ನು ನನ್ನ ಕಿವಿಗೆ ಹಿಡಿಯಿರ” ಎಂದು ಹೇಳಿದೆ. ಬಳಿಕ ಆ ಕಡೆಯಿಂದ ಬಂದ ಧ್ವನಿ ನನಗೆ ಆಘಾತ ಮತ್ತು ಅಚ್ಚರಿ ಮೂಡಿಸಿತು. ಅದು ಮೋದಿ ಧ್ವನಿಯಾಗಿತ್ತು.
“ಪ್ರಧಾನಿ ಮೋದಿ ಅವರು ನನಗೆ ಹೇಳಿದರು, ನಾನು ನಿಮ್ಮನ್ನು ದೂರದರ್ಶನದಲ್ಲಿ ನೋಡುತ್ತಿದ್ದೇನೆ. ನೀವು ಯಾರೂ ಇಲ್ಲದ ದೇಹಗಳನ್ನು ಸುಡುವ ಮೂಲಕ ಉದಾತ್ತ ಕೆಲಸ ಮಾಡುತ್ತಿದ್ದೀರಿ. ಇಡೀ ದೇಶವು ನಿಮ್ಮೊಂದಿಗಿದೆ. ನೀವು ಈ ಕೆಲಸವನ್ನು ಪೂರ್ಣ ಸಂಕಲ್ಪದಿಂದ ಮಾಡುತ್ತಿರಿ” ಎಂದರು.
ದೇಶದ ಉನ್ನತ ನಾಯಕ ಗುರುತಿಸಿ ಪ್ರಶಂಸಿದ್ದು ನನಗೆ ದೊಡ್ಡ ನೈತಿಕ ಬೂಸ್ಟರ್ ಆಗಿ ಕಾರ್ಯನಿರ್ವಹಿಸಿತು ಎಂದು ಅವರು ಹೇಳಿದರು.
ಪಿಎಂ ಮೋದಿಯವರು ಪ್ರತಿ ಘಟನೆಯನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಮತ್ತು ಅವರು ಪ್ರತಿ ವಿವರವನ್ನು ಹೇಗೆ ನೋಡುತ್ತಾರೆ ಎಂದು ನನಗೆ ಆಗ ಅರಿವಾಯಿತು ಎಂದು ಶುಂಟಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.