ಮಾಲೆ: ದ್ವೀಪ ರಾಷ್ಟ್ರದ ಕೋರಿಕೆಯ ಮೇರೆಗೆ ಭಾರತವು ಮಾಲ್ಡೀವ್ಸ್ಗೆ ಕೆಲವು ಅಗತ್ಯ ವಸ್ತುಗಳನ್ನು ರಫ್ತು ಮಾಡಲು ಅನುಮತಿಸಿದ ನಂತರವೂ ಅಲ್ಲಿನ ಸರ್ಕಾರದ ಬೆಂಬಲಿಗರು ಭಾರತವನ್ನು ಅಣಕಿಸುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಮಾಲ್ಟೀವ್ಸ್ ಮಾಜಿ ಸಚಿವೆ ಮತ್ತೊಮ್ಮೆ ಪ್ರತಿಪಕ್ಷ MDP ಯನ್ನು ಗುರಿಯಾಗಿಸಿಕೊಂಡು ಭಾರತವವನ್ನು ಲೇವಡಿ ಮಾಡಿದ್ದಾರೆ.
ಮಾಲ್ಡೀವಿಯನ್ ಅಧ್ಯಕ್ಷ ಮೊಹಮದ್ ಮುಯಿಝು ಅವರ ಪಕ್ಷವಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ಗೆ ಸೇರಿದ ಮಾಜಿ ಸಚಿವೆಯೂ ಆಗಿರುವ ಮರಿಯಮ್ ಶಿಯುನಾ ಮತ್ತೊಮ್ಮೆ ಭಾರತವನ್ನು ಅಣಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಪ್ರಚಾರ ಮಾಡಿದ ನಂತರ ಭಾರತವನ್ನು ಅಪಹಾಸ್ಯ ಮಾಡಿದವರಲ್ಲಿ ಶಿಯುವನಾ ಕೂಡ ಸೇರಿದ್ದಾರೆ.
ಇದೇ ಕಾರಣಕ್ಕೆ ಶಿಯುನಾ ಜೊತೆಗೆ ಇತರ ಕೆಲವು ಮಂತ್ರಿಗಳನ್ನು ಕೂಡ ಮುಯಿಝು ಕ್ಯಾಬಿನೆಟ್ನಿಂದ ಅಮಾನತುಗೊಳಿಸಲಾಗಿದೆ, ಆದರೆ ಈಗ ಅವರು ಮತ್ತೊಮ್ಮೆ ಭಾರತವನ್ನು ಲೇವಡಿ ಮಾಡಿದ್ದರಿಂದ ಭಾರತದ ಮೇಲಿನ ದ್ವೇಷ ಇನ್ನೂ ಕೊನೆಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಹಳಸಿದ ಸಂಬಂಧಗಳ ಹೊರತಾಗಿಯೂ ಭಾರತವು ಮಾಲ್ಡೀವ್ಸ್ಗೆ ಮತ್ತೊಂದು ಸಹಾಯ ಹಸ್ತವನ್ನು ಚಾಚಿರುವ ಕೆಲವು ದಿನಗಳ ನಂತರ ಅವರ ಶಿಯುನಾ ಅವರು ತಮ್ಮ ಎಕ್ಸ್ ಪೋಸ್ಟ್ ಮೂಲಕ ಭಾರತದ ಅಶೋಕ ಚಕ್ರವನ್ನು ಬಳಸಿ ಪ್ರತಿಪಕ್ಷವನ್ನು ಲೇವಡಿ ಮಾಡಿದ್ದಾರೆ. ಇದಕ್ಕೆ ಭಾರೋ ಆಕ್ರೊಶ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ನನಗಿದು ಭಾರತದ ಧ್ವಜದೊಂದಿಗೆ ಸಂಬಂಧಿಸಿದ ಚಿಹ್ನೆ ಎಂದು ಗೊತ್ತಿರಲಿಲ್ಲ, ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದಿದ್ದಾರೆ. ಆದರೆ ಅವರು ಉದ್ದೇಶಪೂರ್ವಕವಾಗಿಯೇ ಭಾರತವನ್ನು ಕೆಣಕಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.