ಕವ್ರಟ್ಟಿ: ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ದ್ವೀಪಗಳಿಗೆ ಭೇಟಿ ನೀಡಿದ ಪರಿಣಾಮವಾಗಿ, ಈಗ ಅಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಆಭರೀ ಹೆಚ್ಚಳವಾಗುತ್ತಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಅಧಿಕಾರಿ ಇಮ್ಥಿಯಾಸ್ ಮೊಹಮ್ಮದ್ ಟಿ ಬಿ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಯ ಪರಿಣಾಮ ದೊಡ್ಡದಾಗಿದೆ, ಸಾಕಷ್ಟು ಪ್ರವಾಸಿಗರಿಂದ ನಾವು ನಿತ್ಯ ವಿಚಾರಣೆಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಹೇಳಿದರು.
ರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರದಿಂದ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಾರುಕಟ್ಟೆಯಿಂದ ಲಕ್ಷದ್ವೀಪದ ಬಗ್ಗೆ ತಿಳಿದುಕೊಳ್ಳುವ ಕುತೂಹಲಗಳು ಹೆಚ್ಚಾಗಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಭವಿಷ್ಯದ ಉಪಕ್ರಮಗಳ ಕುರಿತು ಮಾತನಾಡಿದ ಅವರು, ಲಕ್ಷದ್ವೀಪವು ಹೆಚ್ಚಿನ ಕ್ರೂಸ್ ಹಡಗು ಕಂಪನಿಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಲಕ್ಷದ್ವೀಪದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಭಾರತದ ಮುಖ್ಯ ಭೂಭಾಗದೊಂದಿಗಿನ ಸಂಪರ್ಕದ ಸಮಸ್ಯೆ ಇಲ್ಲ, ವಾಯು ಸಂಪರ್ಕವನ್ನು ಸುವ್ಯವಸ್ಥಿತಗೊಳಿಸುವುದರಿಂದ ಪ್ರವಾಸಿಗರ ಒಳಹರಿವನ್ನು ಹೆಚ್ಚಿಸಲು ಸಾಧ್ಯ ಎಂದಿದ್ದಾರೆ.
ಏತನ್ಮಧ್ಯೆ, ಮುಂಬೈನ ಪ್ರವಾಸಿ ಅಮನ್ ಸಿಂಗ್, “ನಾವು ಲಕ್ಷದ್ವೀಪಕ್ಕೆ ಬಹಳ ಸಮಯದಿಂದ ಬರಲು ಬಯಸಿದ್ದೆವು ಆದರೆ ಪ್ರಧಾನಿ ಮೋದಿಯವರ ಭೇಟಿಯು ನಾವು ಅಲ್ಲಿಗೆ ಹೋಗುವುದನ್ನು ಸಾಧ್ಯವಾಗಿಸಿತು” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.