ಲಕ್ನೋ: ಗೂಂಡಾಗಳಿಗೆ ಸಿಂಹಸ್ವಪ್ನರಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ್ತೊಮ್ಮೆ ಕ್ರಿಮಿನಲ್ಗಳ ವಿರುದ್ಧ ಗುಡುಗಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವ ʼರಾಮ್ ನಾಮ್ ಸತ್ಯʼ ನಿಶ್ಚಿತ ಎಂಬ ಎಚ್ಚರಿಕೆ ನೀಡಿದ್ದಾರೆ.
ಸಮಾಜದ ಭದ್ರತೆಗೆ ಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯ ಸಂಸ್ಕಾರ) ನಿಶ್ಚಿತ ಎಂದು ಹೇಳಿದ್ದಾರೆ. ಅವರು
ಶುಕ್ರವಾರ ಅಲಿಗಢದಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಹೆಣ್ಣುಮಕ್ಕಳು ಮತ್ತು ವ್ಯಾಪಾರಸ್ಥರು ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವವರ ವಿರುದ್ಧ ನಾವು ‘ರಾಮ್ ನಾಮ್ ಸತ್ಯ’ ಖಾತ್ರಿಪಡಿಸುತ್ತೇವೆ” ಎಂದಿದ್ದಾರೆ.
ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮ ಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ.ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಿರಂತರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಮತದಾನದ ಮಹತ್ವವನ್ನು ಅವರು ಒತ್ತಿ ಹೇಳಿದರು.
“10 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗುತ್ತಿದೆ, ಮತ್ತು ಅದು ನಿಮ್ಮ ಮತದ ಮೌಲ್ಯದಿಂದ ನಡೆಯುತ್ತಿದೆ, ತಪ್ಪು ಮತವು ದೇಶವನ್ನು ಭ್ರಷ್ಟಾಚಾರದ ಆಳಕ್ಕೆ ಕೊಂಡೊಯ್ಯುತ್ತಿತ್ತು. ಮೊದಲು ಅರಾಜಕತೆ, ಕರ್ಫ್ಯೂ ಮತ್ತು ಕಾನೂನುಬಾಹಿರತೆ ಇತ್ತು. ಹೆಣ್ಣು ಮಕ್ಕಳು, ನಮ್ಮ ಯುವಕರು ಬೆದರಿಕೆಯಲ್ಲಿದ್ದರು” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.