ನವದೆಹಲಿ: ಲವ್ ಜಿಹಾದ್ನ ಕರಾಳ ಮುಖವನ್ನು ಬಯಲಿಗೆಳೆದ ʼದಿ ಕೇರಳ ಸ್ಟೋರಿʼ ಸಿನಿಮಾ ಇಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ.
ಗುರುವಾರ ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ ಪ್ರಸಾರ ಮಾಡುವ ದೂರದರ್ಶನ ನಿರ್ಧಾರವನ್ನು ಪಿಣರಾಯಿ ಖಂಡಿಸಿದ್ದಾರೆ ಮತ್ತು ಚಲನಚಿತ್ರ ಪ್ರದರ್ಶನವನ್ನು ಹಿಂತೆಗೆದುಕೊಳ್ಳುವಂತೆ ಸಾರ್ವಜನಿಕ ಪ್ರಸಾರಕ ಡಿಡಿಯನ್ನು ಒತ್ತಾಯಿಸಿದರು. ದೂರದರ್ಶನ ಬಿಜೆಪಿ ಮತ್ತು ಆರ್ಎಸ್ಎಸ್ನ ಪ್ರಚಾರ ಯಂತ್ರವಾಗಲು ಬಿಡಬಾರದು ಎಂದಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಸಿನಿಮಾ ಪ್ರಸಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. “ದೂರದರ್ಶನದ ನಿರ್ಧಾರವು ಕೇರಳದ ಜನರಿಗೆ ನೇರವಾಗಿ ಅವಮಾನವಾಗಿದೆ. ಇದು ಮಾದರಿ ಚುನಾವಣಾ ನೀತಿಯ ಉಲ್ಲಂಘನೆಯಾಗಿದೆ, ಇದು ಸಮಾಜವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಅತ್ಯಂತ ಕೀಳುಮಟ್ಟದ ಪ್ರಯತ್ನವಾಗಿದೆ” ಎಂದು ಹೇಳಿದೆ.
ಏಪ್ರಿಲ್ 5 ರಂದು ಚಿತ್ರ ಪ್ರಸಾರವಾಗಲಿದೆ ಎಂದು ದೂರದರ್ಶನ ಪ್ರಕಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.