ನವದೆಹಲಿ: ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಅವರು ಭಾನುವಾರ ರಾತ್ರಿ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಆದರದ ಸ್ವಾಗತವನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, ’ನಮಸ್ತೆ ಚಾನ್ಸೆಲರ್ ಮಾರ್ಕೆಲ್! ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಆತ್ಮೀಯ ಸ್ವಾಗತ. ಫಲಪ್ರಧ ಮಾತುಕತೆ ಮತ್ತು ಇಂಡೋ-ಜರ್ಮನ್ ಬಾಂಧವ್ಯ ವೃದ್ಧಿಯತ್ತ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಮಾರ್ಕೆಲ್ ಮತ್ತು ಮೋದಿಯವರು ಮೂರನೇ ಆಂತರಿಕ ಸರ್ಕಾರಿ ಸಮಾಲೋಚನೆಯ ಅಂಗವಾಗಿ ಸೋಮವಾರ ಸಭೆ ನಡೆಸಲಿದ್ದಾರೆ. ಇದು ಆರು ತಿಂಗಳ ಬಳಿಕ ಉಭಯ ನಾಯಕರ ನಡುವೆ ನಡೆಯುತ್ತಿರುವ ಎರಡನೇ ದ್ವಿಪಕ್ಷೀಯ ಮಾತುಕತೆಯಾಗಲಿದ್ದು, ವ್ಯವಹಾರ, ವ್ಯಾಪಾರ ಮತ್ತು ಭಾರತ-ಇಯು ವ್ಯಾಪಾರ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ.
ಅಕ್ಟೋಬರ್ 4ರಿಂದ 1ರವರೆಗೆ ಮಾರ್ಕೆಲ್ ಭಾರತದಲ್ಲಿದ್ದಾರೆ. ಇವರ ನಿಯೋಗದಲ್ಲಿ ಅವರ ಆರು ಸಂಪುಟ ಸಚಿವರು, ಉನ್ನತ ಉದ್ಯಮಿಗಳೂ ಇದ್ದಾರೆ. ಬೆಂಗಳೂರಿಗೂ ಇವರು ತೆರಳಲಿದ್ದು, ಮೋದಿಯೂ ಆಗಮಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.