ನವದೆಹಲಿ: ಇಂದು ಒಟ್ಟು 14 ಮಂದಿ ಗಣ್ಯರು ರಾಜ್ಯಸಭೆಯ ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ ಭವನದಲ್ಲಿ ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕರಿಸಿದ ಚುನಾಯಿತ ಸದಸ್ಯರೆಂದರೆ ಗೊಲ್ಲ ಬಾಬುರಾವ್, ಮೇದಾ ರಘುನಾಥ ರೆಡ್ಡಿ, ಯರ್ರಂ ವೆಂಕಟ ಸುಬ್ಬಾ ರೆಡ್ಡಿ, ಸಂಜಯ್ ಕುಮಾರ್ ಝಾ, ಡಾ. ಸೈಯದ್ ನಸೀರ್ ಹುಸೇನ್, ಅಜಯ್ ಮಾಕನ್, ಸುಭಾಶಿಶ್ ಖುಂಟಿಯಾ, ದೇಬಶಿಶ್ ಸಾಮಂತರಾಯ, ಅಶ್ವಿನಿ ವೈಷ್ಣವ್, ಸೋನಿಯಾ ಗಾಂಧಿ, ಮದನ್ ರಾಥೋಡ್, ರವಿಚಂದ್ರ ವಡ್ಡಿರಾಜು, ಕುನ್ವರ್ ರತನ್ಜೀತ್ ಪ್ರತಾಪ್ ನಾರಾಯಣ್ ಸಿಂಗ್, ಸಾಮಿಕ್ ಭಟ್ಟಾಚಾರ್ಯ.
ಬುಧವಾರ ಕೂಡ 12 ಮಂದಿ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇಂದ್ರ ಸಚಿವರಾದ ಎಲ್ ಮುರುಗನ್ ಮತ್ತು ಧರ್ಮಶೀಲಾ ಗುಪ್ತಾ, ಸಂಜಯ್ ಯಾದವ್, ಗೋವಿಂದಭಾಯ್ ಲಾಲ್ಜಿಭಾಯಿ ಧೋಲಾಕಿಯಾ, ಸುಭಾಷ್ ಚಂದರ್, ಹರ್ಷ್ ಮಹಾಜನ್ ಇವರಲ್ಲಿ ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.