ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮೂವರು ಆರೋಪಿಗಳು ಬುಧವಾರ ಬೆಳಗ್ಗೆ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತೆರಳಿದ್ದಾರೆ.
ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಅವರು ಜೈಲಿನಲ್ಲಿದ್ದಾಗ ತೃಪ್ತಿಕರ ನಡವಳಿಕೆ ತೋರಿಸಿದ್ದಾರೆ ಮತ್ತು ತಮಿಳುನಾಡು ಸರ್ಕಾರವು ಅವರನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್ ನವೆಂಬರ್ 2022 ರಲ್ಲಿ ಆರು ಮಂದಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಆದೇಶಿಸಿತ್ತು. ಆ ಆರು ಮಂದಿಯಲ್ಲಿ ಇವರು ಸೇರಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿ ಇಡಲಾಗಿತ್ತು. ಇಂದು ಮುಂಜಾನೆ ಪೊಲೀಸ್ ಅಧಿಕಾರಿಗಳ ತಂಡ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲ್ಲಾ ಮೂವರನ್ನು ಕರೆದುಕೊಂಡು ಹೋಗಿ ಶ್ರೀಲಂಕಾಗೆ ಕಳುಹಿಸಿಕೊಟ್ಟಿದೆ. ಇವರು ಶ್ರೀಲಂಕಾ ಪ್ರಜೆಗಳಾದ ಕಾರಣ ಅವರಿಗ ಇತ್ತೀಚೆಗೆ ದ್ವೀಪ ರಾಷ್ಟ್ರದಿಂದ ಪಾಸ್ಪೋರ್ಟ್ಗಳನ್ನು ನೀಡಲಾಗಿತ್ತು.
ಆರು ಮಂದಿಯಲ್ಲಿ ಒಬ್ಬರಾದ ಮುರುಗನ್ ಅವರು ಸುಪ್ರೀಂಕೋರ್ಟ್ನ ಆದೇಶದ ಮೇರೆಗೆ 2022 ರಲ್ಲಿ ಬಿಡುಗಡೆಯಾದ ಆರು ಮಂದಿಯಲ್ಲಿ ಒಬ್ಬರಾಗಿದ್ದು, ಭಾರತೀಯ ಪ್ರಜೆಯಾದ ನಳಿನಿ ಅವರನ್ನು ವಿವಾಹವಾಗಿದ್ದಾರೆ. ನಳಿನಿ ತನ್ನ ಪತಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಇಂದು ಹೋಗಿದ್ದಳು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.