ಮುಂಬಯಿ: ಮೊದಲ ಸೀಸನ್ನಲ್ಲಿ ಭಾರೀ ಜನಪ್ರಿಯತೆ ಗಳಿಸಿ ಭಾರತೀಯರಲ್ಲಿ ಫುಟ್ಬಾಲ್ ಕ್ರೇಝ್ ಹತ್ತಿಸಿದ್ದ ಇಂಡಿಯನ್ ಸೂಪರ್ ಲೀಗ್ ಮತ್ತೆ ಬರುತ್ತಿದೆ. ಆಕ್ಟೋಬರ್ 3ರಂದು ಇದರ ಎರಡನೇ ಸೀಸನ್ಗೆ ಅದ್ದೂರಿ ಚಾಲನೆ ದೊರಕಲಿದೆ.
ಅಟ್ಲಾಂಟಿಕೋ ಡೆ ಕೋಲ್ಕತ್ತಾ, ಚೆನ್ನೈಯಿನ್ ಎಫ್ಸಿ, ಡೆಲ್ಲಿ ಡೈನಮೋಸ್ ಎಫ್ಸಿ, ಎಫ್ಸಿ ಗೋವಾ, ಎಫ್ಸಿ ಪುಣೆ ಸಿಟಿ, ಕೇರಳ ಬ್ಲಾಸ್ಟರ್ಸ್, ಮುಂಬಯಿ ಸಿಟಿ ಎಫ್ಸಿ, ನಾರ್ಥ್ಈಸ್ಟ್ ಯುನೈಟೆಡ್ ಎಫ್ಸಿ ಎಂಬ 8 ಪಂದ್ಯಗಳು ಇಂಡಿಯನ್ ಸೂಪರ್ ಲೀಗ್ನಲಿವೆ.
ಮೊದಲ ಪಂದ್ಯ ಚೆನ್ನೈನ ಜವಹಾರ್ಲಾಲ್ ನೆಹರೂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಅಟ್ಲಾಂಟಿಕೋ ಡೆ ಕೋಲ್ಕತ್ತಾ ಮತ್ತು ಚೆನ್ನೈಯಿನ್ ಎಫ್ಸಿ ನಡುವೆ ನಡೆಯಲಿದೆ.
ಬ್ರೆಝಿಲ್ನ ಖ್ಯಾತ ಫುಟ್ಬಾಲ್ ಆಟಗಾರ ಪಿಲೆ ಅವರೂ ಅಕ್ಟೋಬರ್ 11ರಂದು ಕೋಲ್ಕತ್ತಾಗೆ ಆಗಮಿಸಿ ಐಎಸ್ಎಲ್ ವೀಕ್ಷಣೆ ಮಾಡಲಿದ್ದಾರೆ. ಅಲ್ಲದೇ ಇಂಗ್ಲೆಂಡ್ ಸೂಪರ್ ಸ್ಟಾರ್ ವೈನೆ ರೂನಿ ಅವರೂ ಆಗಮಿಸಲಿದ್ದಾರೆ ಎಂದು ಅಟ್ಲಾಂಟಿಕೋ ಡೆ ಕೋಲ್ಕತ್ತಾ ಸಹ ಸಂಸ್ಥಾಪಕ ಸೌರವ್ ಗಂಗೂಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.