ನವದೆಹಲಿ: ಜೆಎನ್ಯುನಲ್ಲಿ ನಡೆದ ವಿಷಯಗಳನ್ನೇ ಆಧರಿಸಿ ಬಾಲಿವುಡ್ನಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ವಿನಯ್ ಶರ್ಮಾ ಅವರ ಚಿತ್ರ “JNU: ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ” ಸಿನಿಮಾದ ಮೊದಲ ಪೋಸ್ಟರ್ ಅನ್ನು ಇಂದು ಅನಾವರಣಗೊಳಿಸಲಾಗಿದೆ.
ಚಿತ್ರದಲ್ಲಿ ಊರ್ವಶಿ ರೌಟೇಲಾ, ಸಿದ್ಧಾರ್ಥ್ ಬೋಡ್ಕೆ, ಪಿಯೂಷ್ ಮಿಶ್ರಾ, ರಶ್ಮಿ ದೇಸಾಯಿ, ಸೊನ್ನಳ್ಳಿ ಸೇಗಲ್, ರವಿ ಕಿಶನ್ ಮತ್ತು ವಿಜಯ್ ರಾಝ್ ಮುಂತಾದವರು ನಟಿಸಿದ್ದಾರೆ.
ಚಿತ್ರದ ಪೋಸ್ಟರ್ನಲ್ಲಿ ಭಾರತದ ಕೇಸರಿ ನಕ್ಷೆಯನ್ನು ಇದ್ದು, ಅದರ ಮೇಲೆ “ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?” ಎಂದು ಬರೆಯಲಾಗಿದೆ.
ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು “ಜೆಎನ್ಯು ಮೊದಲ ಪೋಸ್ಟರ್ ಔಟ್. 5 ಏಪ್ರಿಲ್ರಂದು ಬಿಡುಗಡೆ. ಶಿಕ್ಷಣ ಸಂಸ್ಥೆಯ ಮುಚ್ಚಿದ ಗೋಡೆಗಳ ಹಿಂದೆ ರಾಷ್ಟ್ರವನ್ನು ಒಡೆಯುವ ಪಿತೂರಿಯನ್ನು ಈ ಸಿನಿಮಾ ರೂಪಿಸುತ್ತದೆ” ಎಂದು ಬರೆದಿದ್ದಾರೆ.
ಚಿತ್ರವು 2024 ರ ಏಪ್ರಿಲ್ನಲ್ಲಿ ದೊಡ್ಡ ಪರದೆಯ ಮೇಲೆ ಬರಲು ಸಿದ್ಧವಾಗಿದೆ.
‘JNU’ FIRST POSTER OUT… 5 APRIL RELEASE… Behind closed walls of education brews a conspiracy to break the nation.#SiddharthBodke, #UrvashiRautela, #PiyushMishra, #RaviKishan, #VijayRaaz, #RashmiDesai, #AtulPandey and #SonnalliSeygall star in #JNU: #JahangirNationalUniversity.… pic.twitter.com/u3EHcOG7pc
— taran adarsh (@taran_adarsh) March 12, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.