ಮುಂಬಯಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವರು ಘಾಟ್ಕೋಪರ್ನಿಂದ ಕಲ್ಯಾಣ್ಗೆ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕರೊಂದಿಗೆ ಚಾಟ್ ಮಾಡುತ್ತಿರುವ ಚಿತ್ರಗಳನ್ನು ಅವರ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.
ಕಲ್ಯಾಣ್ ನಿಲ್ದಾಣಕ್ಕೆ ಆಗಮಿಸಿದ ವಿತ್ತ ಸಚಿವೆ ಸೀತಾರಾಮನ್ ಅವರನ್ನು ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿ ಪಾಟೀಲ್ ಅವರು ಬರಮಾಡಿಕೊಂಡರು.
ಹಣಕಾಸು ಸಚಿವರು ರೈಲು ಪ್ರಯಾಣವನ್ನು ಆನಂದಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಸೀತಾರಾಮನ್ ಅವರು ಕೇರಳದಲ್ಲಿ ವಂದೇ ಭಾರತ್ ರೈಲಿನಲ್ಲಿ ಸವಾರಿ ಮಾಡಿ ಅದನ್ನು ‘ಆಹ್ಲಾದಕರ ಅನುಭವ’ ಎಂದು ವಿವರಿಸಿದ್ದರು. ದೇಶದಲ್ಲಿ ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಪರಿಚಯಿಸಿದ್ದಕ್ಕಾಗಿ ಅವರು ರೈಲ್ವೆ ಸಚಿವಾಲಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು, ಅವುಗಳ ಜನಪ್ರಿಯತೆಯನ್ನು ಕೊಂಡಾಡಿದ್ದರು.
Smt @nsitharaman interacts with commuters while travelling from Ghatkopar to Kalyan in a Mumbai local train. pic.twitter.com/T15BdC3f5V
— Nirmala Sitharaman Office (@nsitharamanoffc) February 24, 2024
Smt @nsitharaman was received by Shri @KapilPatil_, Hon'ble Union Minister of State for Panchayati Raj, upon her arrival at the Kalyan Railway Station. https://t.co/KE4z1WDHf3 pic.twitter.com/eCiuTUmYYm
— Nirmala Sitharaman Office (@nsitharamanoffc) February 24, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.