ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಸಂಭಾಲ್ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. ಸಮಾರಂಭದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮಾತನಾಡಿದ ಆಚಾರ್ಯ ಪ್ರಮೋದ್ ಕೃಷ್ಣಂ, “ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀ ಕಲ್ಕಿ ಧಾಮಕ್ಕೆ ಶಂಕುಸ್ಥಾಪನೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರಧಾನಿ ಮೋದಿ ಅವರು ಬೆಳಿಗ್ಗೆ 10:25 ರ ಸುಮಾರಿಗೆ ಇಲ್ಲಿಗೆ ತಲುಪುತ್ತಾರೆ. ಪ್ರಧಾನಿ ಮೋದಿ ಶ್ರೀ ಕಲ್ಕಿ ಧಾಮದ ಗರ್ಭಗುಡಿಯಲ್ಲಿ ಮುಖ್ಯ ಶಿಲೆಯನ್ನು ಸ್ಥಾಪಿಸುತ್ತಾರೆ” ಎಂದು ಹೇಳಿದ್ದರು.
ಶ್ರೀ ಕಲ್ಕಿ ಧಾಮದ ನಿರ್ಮಾಣವನ್ನು ಅದರ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ನೇತೃತ್ವದ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ನೋಡಿಕೊಳ್ಳುತ್ತದೆ.
ಯುಪಿ ಪ್ರವಾಸದಲ್ಲಿರುವ ಮೋದಿ ಇಂದು 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 14,000 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಹಿಂದಿನ ವರ್ಷ ನಡೆದ ಯುಪಿ ಗ್ಲೋಬಲ್ ಇನ್ವೆಸ್ಟರ್ಸ್ ಶೃಂಗಸಭೆ 2023 (UPGIS 2023) ಸಮಯದಲ್ಲಿ ಪಡೆದ ಹೂಡಿಕೆ ಪ್ರಸ್ತಾಪಗಳಿಂದ ಹುಟ್ಟಿಕೊಂಡಿವೆ.
#WATCH | Uttar Pradesh: Prime Minister Narendra Modi lays the foundation stone of Hindu shrine Kalki Dham in Sambhal.
Uttar Pradesh CM Yogi Adityanath and Shri Kalki Dham Nirman Trust Chairman Acharya Pramod Krishnam also present. pic.twitter.com/sTJk2FPEYc
— ANI (@ANI) February 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.