ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಲೋಕಸಭೆಗೆ ವಿದಾಯ ಹೇಳಿದ್ದಾರೆ. 25 ವರ್ಷಗಳ ನಂತರ ಅವರು ಲೋಕಸಭಾ ಸ್ಥಾನಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ರಾಜ್ಯಸಭೆಗೆ ಇಂದು ಅವರು ನಾಮನಿರ್ದೇಶನ ಸಲ್ಲಿಕೆ ಮಾಡಿದ್ದಾರೆ.
ಅವರು ಇಂದು ರಾಜಸ್ಥಾನದ ಜೈಪುರದಿಂದ ರಾಜ್ಯಸಭೆಗೆ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ವೇಳೆ ಪುತ್ರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗಿದ್ದರು ಎಂದು ಹೇಳಲಾಗಿದೆ.
ಸೋನಿಯಾ ಗಾಂಧಿ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಎರಡನ್ನೂ ಗೆದ್ದರು. 2004 ರಲ್ಲಿ ಅವರು ಕಾಂಗ್ರೆಸ್ನ ಎರಡನೇ ಭದ್ರಕೋಟೆಯಾಗಿದ್ದ ಯುಪಿಯ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಿದರು. 1999 ರಿಂದಲೂ ಅವರು ಲೋಕಸಭೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸ್ಥಿರ ಮತ್ತು ಮಾರ್ಗದರ್ಶಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೊಂದೆ ಲೋಕಸಭೆಯಿಂದ ಸೋನಿಯಾ ಗಾಂಧಿ ನಿರ್ಗಮಿಸುತ್ತಿದ್ದಂತೆ ಅವರ ಪುತ್ರಿ ಪ್ರಿಯಾಂಕ ಗಾಂಧಿ ಹೆಸರು ಮುನ್ನಲೆಗೆ ಬರುತ್ತಿದೆ. ತಮ್ಮ ತಾಯಿಯ ಕ್ಷೇತ್ರದಿಂದ ಅವರು ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
#WATCH | Congress Parliamentary Party Chairperson Sonia Gandhi arrives at the State Assembly in Jaipur, Rajasthan.
She is filing her nomination for Rajya Sabha elections from here today. pic.twitter.com/W1gvEgtlc7
— ANI (@ANI) February 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.