ನವದೆಹಲಿ: 1901 ರಿಂದೀಚೆಗಿನ ಲೆಕ್ಕಚಾರದಲ್ಲಿ 2024 ಭಾರತದಲ್ಲಿ ದಾಖಲಾದ ಅತ್ಯಂತ ಬಿಸಿಯಾದ ವರ್ಷವಾಗಿದೆ ಎಂದು ಭಾರತೀಯ ಹವಮಾಣ ಇಲಾಖೆ ಬುಧವಾರ ತಿಳಿಸಿದೆ.
ವರ್ಷದ ಕೊನೆಯ ಮೂರು ತಿಂಗಳುಗಳು (ಅಕ್ಟೋಬರ್-ಡಿಸೆಂಬರ್) ದಾಖಲೆಯ ಮಟ್ಟದಲ್ಲಿ ಬೆಚ್ಚಗಿತ್ತು. ಅದರಲ್ಲೂ, ಅಕ್ಟೋಬರ್ 123 ವರ್ಷಗಳಲ್ಲೇ ಅತ್ಯಂತ ಬೆಚ್ಚಗಿನ ತಿಂಗಳಾಗಿ ಹೊರಹೊಮ್ಮಿದೆ ಎಂದು ತಿಳಿಸಿದೆ.
2024 ರಲ್ಲಿ ವಾರ್ಷಿಕ ಸರಾಸರಿ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ದೀರ್ಘಾವಧಿಯ ಸರಾಸರಿಯನ್ನು 0.65 ಡಿಗ್ರಿ ಸೆಲ್ಸಿಯಸ್ ಮೀರಿಸಿದೆ. ಸರಾಸರಿ ಗರಿಷ್ಠ ತಾಪಮಾನವು 31.25 ಡಿಗ್ರಿ ಸೆಲ್ಸಿಯಸ್ ಆಗಿದೆ, ಇದು ಸಾಮಾನ್ಯಕ್ಕಿಂತ 0.20 ಡಿಗ್ರಿ ಸೆಲ್ಸಿಯಸ್ ಆಗಿದೆ, ಆದರೆ ಸರಾಸರಿ ಕನಿಷ್ಠ ತಾಪಮಾನವು 20.24 ಡಿಗ್ರಿ ಸೆಲ್ಸಿಯಸ್ ತಲುಪಿದೆ, ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಅವರು ದೃಢಪಡಿಸಿದಂತೆ 0.90 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದೆ.
ಜಾಗತಿಕ ತಾಪಮಾನ ವೇಗದಲ್ಲಿ ಏರಿಕೆಯಾಗುತ್ತಿದ್ದು, ಭಾರತವು ಕೂಡ ಅತ್ಯಂತ ಬಿಸಿಯನ್ನು ಎದುರಿಸುತ್ತಿದೆ. ವಿಶ್ವ ಹವಾಮಾನ ಸಂಸ್ಥೆಯು 2024 ಜಾಗತಿಕವಾಗಿ ದಾಖಲೆಯ ಅತ್ಯಂತ ಬೆಚ್ಚಗಿನ ವರ್ಷವಾಗಿದೆ ಎಂಬುದಾಗಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.