ನವದೆಹಲಿ: ಗಣರಾಜ್ಯೋತ್ಸವ ಪರೇಡ್ 2025 ಮತ್ತು ಬೀಟಿಂಗ್ ರಿಟ್ರೀಟ್ನ ಟಿಕೆಟ್ಗಳ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತಿದೆ. ಸೇನಾ ಭವನ, ಶಾಸ್ತ್ರಿ ಭವನ, ಜಂತರ್ ಮಂತರ್, ಪ್ರಗತಿ ಮೈದಾನ ಮತ್ತು ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ತೆರೆಯಲಾದ ಕೌಂಟರ್ಗಳಲ್ಲಿ ಮೂಲ ಫೋಟೋ ಐಡಿ ಕಾರ್ಡ್ ನೀಡಿ ಟಿಕೆಟ್ಗಳನ್ನು ಖರೀದಿಸಬಹುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಮತ್ತು ಕೇಂದ್ರ/ರಾಜ್ಯ ಸರ್ಕಾರದಿಂದ ನೀಡಲಾದ ಐಡಿ ಕಾರ್ಡ್ ಇತ್ಯಾದಿಗಳನ್ನು ಒದಗಿಸಿ ಟಿಕೆಟ್ ಪಡೆಯಬೇಕು, ಅಲ್ಲದೇ ಇವುಗಳನ್ನು ಗಣರಾಜ್ಯೋತ್ಸವದ ಸಮಾರಂಭಕ್ಕೆ ಭೇಟಿ ನೀಡುವ ಸಂದರ್ಭದಲ್ಲೂ ಕೊಂಡೊಯ್ಯುವ ಅಗತ್ಯವಿದೆ.
ಸಾರ್ವಜನಿಕರು ನೇರವಾಗಿ aamantran.mod.gov.in ವೆಬ್ಸೈಟ್ ಮತ್ತು ಆಮಂತ್ರನ್ ಮೊಬೈಲ್ ಅಪ್ಲಿಕೇಶನ್ನಿಂದ ಟಿಕೆಟ್ಗಳನ್ನು ಖರೀದಿಸಬಹುದು. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗೆ 20 ರಿಂದ 100 ರೂಪಾಯಿಗಳ ಟಿಕೆಟ್ ದರವಿದ್ದು, ಬೀಟಿಂಗ್ ರಿಟ್ರೀಟ್ ರಿಹರ್ಸಲ್ಗೆ 20 ರೂಪಾಯಿಗೆ ಟಿಕೆಟ್ ಲಭ್ಯವಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.