ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರ ಅಬುಧಾಬಿಯಲ್ಲಿ ನಡೆಯಲಿರುವ ‘ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 65,000 ಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕರಿಸಲಾಗಿದೆ. ಆದರೆ ಅಬುಧಾಬಿಯಲ್ಲಿ ಹವಮಾನ ಪ್ರತಿಕೂಲವಾಗಿದ್ದು, ಕಾರ್ಯಕ್ರಮಕ್ಕೆ ಭಾಗವಹಿಸುವವರ ಸಂಖ್ಯೆಯನ್ನು ಆಯೋಜಕರು ಕಡಿಮೆ ಮಾಡುವ ನಿರ್ಧಾರ ಮಾಡಿದ್ದಾರೆ. ವರದಿಗಳ ಪ್ರಕಾರ 2500 ಮಂದಿಗೆ ಮಾತ್ರ ಅವಕಾಶ ನೀಡುವ ನಿರೀಕ್ಷೆ ಇದೆ.
ಪ್ರಸ್ತುತ ಯುಎಇಯಾದ್ಯಂತ ತೀವ್ರ ಮಳೆ ಮತ್ತು ಗುಡುಗು ವರದಿಯಾಗುತ್ತಿವೆ.
ಇಂಡಿಯನ್ ಪೀಪಲ್ ಫೋರಂನ ಅಧ್ಯಕ್ಷ ಮತ್ತು ‘ಅಹ್ಲಾನ್ ಮೋದಿ’ ಉಪಕ್ರಮದ ನಾಯಕ ಜಿತೇಂದ್ರ ವೈದ್ಯ ಅವರು ಕಾರ್ಯಕ್ರಮದ ವಿಶಿಷ್ಟ ಸ್ವರೂಪದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
“ಇದು ಅತ್ಯಂತ ವಿಶಿಷ್ಟ ರೀತಿಯ ಕಾರ್ಯಕ್ರಮವಾಗಿದೆ ಏಕೆಂದರೆ ಈ ಕಾರ್ಯಕ್ರಮವನ್ನು ಯಾವುದೇ ಒಂದು ಸಂಸ್ಥೆ ನಡೆಸುತ್ತಿಲ್ಲ. ಇಡೀ ಸಮುದಾಯ ಇದನ್ನು ಆಯೋಜಿಸುತ್ತಿದೆ. ನಿಮಗೆ ತಿಳಿದಿರುವಂತೆ, ಪ್ರಧಾನಿ ಮೋದಿಯವರ ಹೆಸರು ಬಂದಾಗ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದು ಪ್ರಧಾನಿಯ ಮೇಲಿನ ಪ್ರೀತಿ ಇದಕ್ಕೆ ಕಾರಣ” ಎಂದು ಜಿತೇಂದ್ರ ವೈದ್ಯ ತಿಳಿಸಿದರು.
ಅಬುಧಾಬಿಯಲ್ಲಿ ಭಾರತೀಯ ಸಮುದಾಯವು ಆಯೋಜಿಸಿರುವ ʼಅಹ್ಲಾನ್ ಮೋದಿʼ ಕಾರ್ಯಕ್ರಮ ಭಾರೀ ಗಮನಸೆಳೆದಿದ್ದು, ಇದು ಪ್ರಧಾನಿ ಮೋದಿಯವರ ಬಗೆಗಿನ ವ್ಯಾಪಕ ಮೆಚ್ಚುಗೆ ಮತ್ತು ಬೆಂಬಲವನ್ನು ಪ್ರದರ್ಶಿಸುತ್ತದೆ.
ಕಾರ್ಯಕ್ರಮದ ನೋಂದಣಿ 65,000 ದಾಟಿದೆ ಮತ್ತು ನೋಂದಣಿ ಅನ್ನು ಫೆಬ್ರವರಿ 2 ರಂದು ಮುಚ್ಚಲಾಯಿತು. ಆದರೆ ನೋಂದಾಯಿತರೆಲ್ಲರಿಗೆ ಭಾಗವಹಿಸುವ ಅವಕಾಶ ದೊರೆಯುತ್ತಿಲ್ಲ.
ಸರಿಸುಮಾರು 3.5 ಮಿಲಿಯನ್ ಭಾರತೀಯ ವಲಸಿಗ ಸಮುದಾಯವು ಯುಎಇಯಲ್ಲಿ ಇದ್ದು, ಇದು ಅಲ್ಲಿನ ಅತಿದೊಡ್ಡ ಜನಾಂಗೀಯ ಸಮುದಾಯವಾಗಿದೆ. ಆದ ದೇಶದ ಜನಸಂಖ್ಯೆಯ ಸರಿಸುಮಾರು 35 ಪ್ರತಿಶತವನ್ನು ಹೊಂದಿದೆ.
ʼಅಹ್ಲಾನ್ ಮೋದಿʼ ಕಾರ್ಯಕ್ರಮವು 700 ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾವಿದರಿಂದ ಪ್ರದರ್ಶನ, ಭಾರತೀಯ ಕಲೆಗಳ ವಿಶಾಲ ವೈವಿಧ್ಯತೆಯ ಅನಾವರಣ ಮತ್ತು ಅಂತರ್ಗತ ಸಾಂಸ್ಕೃತಿಕ ವೈಭವವನ್ನು ಹೊಂದಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.