ನವದೆಹಲಿ: ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಪಕ್ಷವು ಎನ್ಡಿಎ ಮೈತ್ರಿಕೂಟವನ್ನು ಸೇರ್ಪಡೆಗೊಳ್ಳಲಿದೆ ಎಂದು ಅದರ ಮುಖ್ಯಸ್ಥ ಚೌಧರಿ ಜಯಂತ್ ಸಿಂಗ್ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಕಡಿಮೆ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇದು ಬಹಳ ಹಿಂದೆಯೇ ಯೋಜಿಸಿ ತೆಗೆದುಕೊಂಡ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ಈ ಘೋಷಣೆ ಮೂಲಕ ಜೆಡಿಯು ಬಳಿಕ ಮತ್ತೊಂದು ಪಕ್ಷ ಇಂಡಿ ಒಕ್ಕೂಟವನ್ನು ತೊರೆದು ಎನ್ಡಿಎ ಮೈತ್ರಿಕೂಟ ಸೇರಿದಂತಾಗಿದೆ.
ಒಂದು ದಶಕದಿಂದ ಆರ್ಎಲ್ಡಿ ಬಿಜೆಪಿಯ ಮಿತ್ರ ಪಕ್ಷವಾಗಿರಲಿಲ್ಲ. 15 ವರ್ಷಗಳ ಹಿಂದೆ 2009ರ ಲೋಕಸಭೆ ಚುನಾವಣೆಯಲ್ಲಿ ಆರ್ಎಲ್ಡಿ ಕೊನೆಯ ಬಾರಿ ಬಿಜೆಪಿ ಮೈತ್ರಿಕೂಟದ ಭಾಗವಾಗಿತ್ತು. ನಂತರ 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸೇರಿತ್ತು. 2019ರ ಲೋಕಸಭೆ ಚುನಾವಣೆ ಮತ್ತು 2022ರ ವಿಧಾನಸಭೆ ಚುನಾವಣೆಯಲ್ಲಿ ಆರ್ಎಲ್ಡಿ ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟದ ಭಾಗವಾಗಿತ್ತು.
ಒಂದು ದಶಕದಿಂದ ಆರ್ಎಲ್ಡಿ ಬಿಜೆಪಿ ವಿರೋಧಿ ಪಾಳಯದಲ್ಲಿದೆ. 2013ರ ಮುಜಾಫರ್ನಗರ ಗಲಭೆಯ ನಂತರವೂ ಜಾಟ್ಗಳಲ್ಲಿ ಪ್ರಬಲ ಧ್ರುವೀಕರಣ ಉಂಟಾದಾಗಲೂ ಆರ್ಎಲ್ಡಿ ಜಾತ್ಯತೀತ ಪಾಳಯದಲ್ಲಿಯೇ ಇತ್ತು.ಆದರೆ ಗಲಭೆಯ ನಂತರ ಅದು ತನ್ನ ಬಹುಪಾಲು ಜಾಟ್ ನೆಲೆನ್ನು ಕಳೆದುಕೊಂಡಿತು ಮತ್ತು ಹಲವಾರು ವರ್ಷಗಳಿಂದ ಅದು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದೆ.
ಆರ್ಎಲ್ಡಿ ಮುಖ್ಯಸ್ಥರಾಗಿರುವ ಜಯಂತ್ ಸಿಂಗ್ ಅವರು ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ. ಚೌಧರಿ ಚರಣ್ ಸಿಂಗ್ ಅವರಿಗೆ ಮೋದಿ ಸರ್ಕಾರ ಇತ್ತೀಚಿಗೆ ಭಾರತ ರತ್ನ ಘೋಷಣೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.