ಲಾಹೋರ್: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಮತ್ತು ನಾಯಕ ಆಸಿಫ್ ಅಲಿ ಜರ್ದಾರಿ ಭಾನುವಾರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರೊಂದಿಗೆ ಸಭೆ ನಡೆಸಿದರು. ಎರಡು ಪಕ್ಷಗಳು “ರಾಜಕೀಯ ಅಸ್ಥಿರತೆಯಿಂದ ದೇಶವನ್ನು ಉಳಿಸಲು ತಾತ್ವಿಕವಾಗಿ” ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ.
ಎರಡು ಪಕ್ಷಗಳ ನಾಯಕರು ದೇಶದ ಒಟ್ಟಾರೆ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ರಾಜಕೀಯ ಸಹಕಾರದ ಬಗ್ಗೆ ಮಾತನಾಡಿದರು ಎಂದು, ಪಿಎಂಎಲ್-ಎನ್ ಅಧ್ಯಕ್ಷ X ನಲ್ಲಿ ತಿಳಿಸಿದರು. ಶೆಹಬಾಜ್ ಷರೀಫ್ ಮತ್ತು ಬಿಲಾವಲ್ ಭುಟ್ಟೊ-ಜರ್ದಾರಿ ಅವರು ರಾಷ್ಟ್ರದಲ್ಲಿ ಸ್ಥಿರ ರಾಜಕೀಯ ತರಲು ರಾಜಕೀಯವಾಗಿ ಸಹಕರಿಸಲು ಒಪ್ಪಿಕೊಂಡರು ಎಂದು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಹೇಳಿಕೆಯ ಪ್ರಕಾರ, ಪಿಪಿಪಿ ನಾಯಕತ್ವವು ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಿಎಂಎಲ್-ಎನ್ ಪ್ರಸ್ತಾಪಗಳನ್ನು ಮುಂದಿಡುತ್ತದೆ.
ಇನ್ನೊಂದೆಡೆ , ಜೈಲಿನಲ್ಲಿರುವ ಪಾಕಿಸ್ತಾನಿ ನಾಯಕ ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸರ್ಕಾರ ರಚಿಸಲು ಯೋಜಿಸಿದ್ದಾರೆ ಎಂದು ಮಾಜಿ ಪ್ರಧಾನಿಯ ಹಿರಿಯ ಸಹಾಯಕರು ಶನಿವಾರ ಹೇಳಿದ್ದಾರೆ. ಶನಿವಾರ ಸೇನಾ ನೆಲೆಗಳ ಮೇಲೆ ಮೇ 9 ರಂದು ನಡೆದ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಖಾನ್ಗೆ ಜಾಮೀನು ನೀಡಲಾಯಿತು.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ 265 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸರಳ ಬಹುಮತಕ್ಕೆ ರಾಜಕೀಯ ಪಕ್ಷಕ್ಕೆ 133 ಸ್ಥಾನಗಳ ಅಗತ್ಯವಿದೆ. ಉಗ್ರರ ದಾಳಿ ಮತ್ತು ಚುನಾವಣಾ ದುರ್ವರ್ತನೆಯ ಆರೋಪಗಳ ನಡುವೆ ಪಾಕಿಸ್ತಾನದಲ್ಲಿ ಗುರುವಾರ ಮತದಾನ ನಡೆದಿದೆ. ಸಂಸತ್ತಿನ ಚುನಾವಣೆಯ ನಂತರ, ಹೊಸದಾಗಿ ಆಯ್ಕೆಯಾದ ಸಂಸತ್ತು ಪ್ರಧಾನಿಯನ್ನು ಆಯ್ಕೆ ಮಾಡುತ್ತದೆ. ಯಾವುದೇ ಪಕ್ಷವು ಬಹುಮತವನ್ನು ಗಳಿಸದಿದ್ದರೆ, ಹೆಚ್ಚಿನ ಸಂಖ್ಯೆಯ ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಪಕ್ಷವು ಸಮ್ಮಿಶ್ರ ಸರ್ಕಾರವನ್ನು ರಚಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.