ವಾರಣಾಸಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಆದೇಶದ ಮೇರೆಗೆ 30 ವರ್ಷಗಳ ಹಿಂದೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯನ್ನು ಮುಚ್ಚಲಾಯಿತು. ಇದೀಗ 30 ವರ್ಷಗಳ ನಂತರ ಜಿಲ್ಲಾ ನ್ಯಾಯಾಲಯವು ಆಡಳಿತಕ್ಕೆ ಆದೇಶಿಸಿದ ನಂತರ ಹಿಂದೂ ಭಕ್ತರು ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪ್ರಾರ್ಥನೆ ನಡೆಸಲು ಪ್ರಾರಂಭಿಸಿದ್ದಾರೆ.
“ಹಿಂದೂ ಕಡೆಯವರಿಗೆ ನೆಲ ಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಏಳು ದಿನಗಳಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು. ಎಲ್ಲರಿಗೂ ಅಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಇದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಪವಿರುವ ಪ್ರದೇಶವು ನಿನ್ನೆ ತಡರಾತ್ರಿ ಬಿರುಸಿನ ಚಟುವಟಿಕೆಗೆ ಸಾಕ್ಷಿಯಾಯಿತು, ಹಿಂದೂ ಭಕ್ತರು ‘ವ್ಯಾಸ್ ಕಾ ತೆಹಕಾನಾ’ ಎಂದು ಹೆಸರಿಸಲಾದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಜ್ಞಾನವಾಪಿಗೆ ಬರಲು ಪ್ರಾರಂಭಿಸಿದ್ದಾರೆ. ಹಿಂದೂ ಸಂಘಟನೆಯಾದ ರಾಷ್ಟ್ರೀಯ ಹಿಂದೂ ದಳದ ಸದಸ್ಯರು ಮಸೀದಿ ಬಳಿಯ ಫಲಕದ ಮೇಲೆ ‘ಮಂದಿರ’ ಪದವನ್ನು ಅಂಟಿಸುತ್ತಿರುವುದು ಕಂಡುಬಂದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಜ್ಞಾನವಾಪಿ ನಾಲ್ಕು ನೆಲಮಾಳಿಗೆಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಅಲ್ಲಿ ವಾಸಿಸುತ್ತಿದ್ದ ಪುರೋಹಿತರ ಕುಟುಂಬದ ವಶದಲ್ಲಿತ್ತು. ವ್ಯಾಸ್ ಕುಟುಂಬದ ಸದಸ್ಯರಾದ ಸೋಮನಾಥ್ ವ್ಯಾಸ್ ಅವರು 1993 ರಲ್ಲಿ ಇಲ್ಲಿ ಬೀಗ ಜಡಿಯುವ ಮುನ್ನ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕುಟುಂಬದ ಸದಸ್ಯರಾದ ಶೈಲೇಂದ್ರ ಪಾಠಕ್ ಅವರು ವಂಶಪಾರಂಪರ್ಯವಾಗಿ ಅರ್ಚಕರಾದ ತಮಗೆ ಕಟ್ಟಡ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಒಂದು ವಾರದೊಳಗೆ ನೆಲಮಾಳಿಗೆಯೊಳಗೆ ಪ್ರಾರ್ಥನೆಯನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಖಚಿತಪಡಿಸಿಕೊಳ್ಳಲು ನಿನ್ನೆ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.