ಮಾಲೆ: ಮಾಲ್ಡೀವ್ಸ್ ಸಂಸತ್ತು ರಣರಂಗವಾದ ಪ್ರಸಂಗ ನಿನ್ನೆ ಜರುಗಿದೆ. ಸಂಸತ್ ಸದಸ್ಯರು ಪರಸ್ಪರ ಹೊಡೆದಾಡಿ ಒಬ್ಬರನ್ನೊಬ್ಬರು ಎಳೆದಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸಂಸದ ಇಸಾ ಮತ್ತು ಆಡಳಿತಾರೂಢ ಪಿಎನ್ಸಿ ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಅವರು ಕಾದಾಟ ನಡೆಸಿದ ಸಂಸತ್ತಿನ ಪ್ರಮುಖ ಸದಸ್ಯರು ಎಂದು ಹೇಳಲಾಗಿದೆ.
ಮತ್ತೊಂದು ವೀಡಿಯೊದಲ್ಲಿ, ಸಂಸದರು ಸ್ಪೀಕರ್ ಕಿವಿಗೆ ಹಾರ್ನ್ ಊದುತ್ತಿರುವುದನ್ನು ಮತ್ತು ಸ್ಪೀಕರ್ ಅದನ್ನು ತಡೆಯಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.
ಹಲವು ಆಡಳಿತ ಪಕ್ಷದ ಸದಸ್ಯರು ಕೂಡ ಕಲಾಪಕ್ಕೆ ಅಡ್ಡಿಪಡಿಸಿದರು ಎಂದು ವರದಿಗಳು ಹೇಳಿವೆ.
ಸೂಟು, ಟೈಗಳನ್ನು ಧರಿಸಿ ಸಭ್ಯರಂತೆ ಕಾಣುತ್ತಿದ್ದ ಪುರುಷರು ಹುಚ್ಚರಂತೆ ಒಬ್ಬರಿಗೊಬ್ಬರು ಕಾದಾಡಿದ ಪರಿ ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಗಲಾಟೆಯಿಂದ ಕೆಲವರಿಗೆ ಗಾಯಗಳೂ ಆಗಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಂಸದರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಗಿದೆ.
ಹಿಂಸಾತ್ಮಕ ಘಟನೆಯು ನಿಗದಿತ ಮಧ್ಯಾಹ್ನ 1:30 ಕ್ಕೆ ಸ್ವಲ್ಪ ಮುಂಚಿತವಾಗಿ ಸಂಭವಿಸಿದೆ. ಮುಯಿಝು ಸರ್ಕಾರದಿಂದ ಮಂತ್ರಿಗಳ ಅನುಮೋದನೆಯ ಮೇಲೆ ಮತ ಚಲಾಯಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ಗದ್ದಲ ಏರ್ಪಟ್ಟಿದೆ.
*Viewer discretion advised*
Parliament proceedings have been disrupted after clashes between PPM/PNC MPs and opposition MPs. pic.twitter.com/vhvfCBgQ1s
— Adhadhu (@AdhadhuMV) January 28, 2024
ކެނދިކުޅުދޫ ދާއިރާގެ މެމްބަރު އީސާގެ ފައިގައި ހިފައި ކަނޑިތީމު މެމްބަރު ޝަހީމް ވައްޓާލާ މަންޒަރު. އެމްޑީޕީ ދޫކޮށް ޕީއެންސީއާ ގުޅުނު ސަރުކާރުގެ މެމްބަރުން މަޖިލީހަށް ހުރަސް އެޅުމާއެކު ތަޅުމުގައި ހަމަނުޖެހުން އަންނަނީ ހިނގަމުން. pic.twitter.com/mnmzvYKsrO
— Adhadhu (@AdhadhuMV) January 28, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.