ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗಿನ ತಮ್ಮ ಪಕ್ಷದ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಲವಾದ ಲೋಕಸಭಾ ಸ್ಥಾನಗಳೊಂದಿಗೆ ಮೈತ್ರಿ ಒಳ್ಳೆಯ ಆರಂಭ ಪಡೆಯಲಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ರಾಜ್ಯದಲ್ಲಿ ಒಟ್ಟು 80 ಲೋಕಸಭಾ ಸಂಸದ ಸ್ಥಾನಗಳು ಇವೆ.
“ಕಾಂಗ್ರೆಸ್ನೊಂದಿಗಿನ ನಮ್ಮ ಸೌಹಾರ್ದಯುತ ಮೈತ್ರಿಯು ಪ್ರಬಲ ಸ್ಥಾನಗಳೊಂದಿಗೆ ಉತ್ತಮ ಆರಂಭ ಪಡೆಯಲಿದೆ. ಈ ಪ್ರವೃತ್ತಿಯು ಗೆಲುವಿನ ಸಮೀಕರಣದೊಂದಿಗೆ ಮುಂದುವರಿಯುತ್ತದೆ. ಇಂಡಿ ಒಕ್ಕೂಟ ತಂತ್ರವು ಇತಿಹಾಸವನ್ನು ಬದಲಾಯಿಸುತ್ತದೆ” ಎಂದು ಯಾದವ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎಗೆ ಮರಳಬಹುದು ಎಂಬ ಬಲವಾದ ಸೂಚನೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ಆಗಸ್ಟ್ 2022 ರಲ್ಲಿ ತಮ್ಮ ಮಾಜಿ ಪ್ರತಿಸ್ಪರ್ಧಿ ಲಾಲು ಪ್ರಸಾದ್ ಸ್ಥಾಪಿಸಿದ RJD ಯೊಂದಿಗೆ ಕೈಜೋಡಿಸಿದರು. ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾದ ನಿತೀಶ್ ಅವರು ನಂತರ, ಬಿಜೆಪಿಯನ್ನು ಎದುರಿಸಲು ದೇಶಾದ್ಯಂತ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಕೈಗೊಂಡರು, ಅದು ವಿರೋಧ ಪಕ್ಷವಾದ ಇಂಡಿ ಒಕ್ಕೂಟವಾಗಿ ಕೊನೆಗೊಂಡಿತು.
ಒಂದು ವೇಳೆ ನಿತೀಶ್ ಕುಮಾರ್ ಎನ್ಡಿಎ ತೆಕ್ಕೆಗೆ ಮರಳಲು ನಿರ್ಧರಿಸಿದರೆ, ಪ್ರತಿಪಕ್ಷಗಳ ಒಕ್ಕೂಟಕ್ಕೆ ದೊಡ್ಡ ಹೊಡೆತ ಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.