ನವದೆಹಲಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ಅತ್ಯದ್ಭುತವಾದ ಪಥಸಂಚಲನ ನಡೆಸಲಾಗಿದೆ. ಇದರಲ್ಲಿ ಭಾರತದ ನಾರಿಶಕ್ತಿಯ ತಾಕತ್ತು ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅದರಲ್ಲೂ ದ್ವಿಚಕ್ರವಾಹನದಲ್ಲಿ 265 ಮಹಿಳೆಯರು ಪ್ರದರ್ಶಿಸಿದ ವಿವಿಧ ಸಾಹಸಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿದೆ.
ರಾಷ್ಟ್ರವ್ಯಾಪಿಯಾಗಿ ನಿಯೋಜಿಸತರಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಏಕತೆ ಮತ್ತು ಒಳಗೊಳ್ಳುವಿಕೆಯ ಸಂದೇಶ ತಿಳಿಸುವ ಸಾಹಸ ಪ್ರದರ್ಶಿಸಿದರು. ನಂತರ ಸಿಆರ್ ಪಿಎಫ್, ಬಿಎಸ್ ಎಫ್ ಮತ್ತು ಎಸ್ ಎಸ್ ಬಿ ಸಿಬ್ಬಂದಿ ಯೋಗ ಸೇರಿದಂತೆ ಭಾರತೀಯ ಮೌಲ್ಯಗಳ ಶಕ್ತಿ ಕುರಿತ ಪ್ರದರ್ಶನ ನೀಡಿದರು.
ಸಹಾಯಕ ಕಮಾಂಡೆಂಟ್ ಸೀಮಾ ನಾಗ್ ಕಮಾಂಡೆಂಟ್ ʼಅಭಿವಾದನ’ ಪ್ರದರ್ಶನ ನೀಡಿದರೆ, ಎಚ್ಸಿ ರೀಟಾ ಬಿಷ್ಟ್ ಮತ್ತು ಇತರ ಏಳು ಮಂದಿ ‘ಲಕ್ಷಿತಾ’ ಪ್ರದರ್ಶನವನ್ನು ನೀಡಿದರು. ಸಿಟಿ ಅಮನ್ದೀಪ್ ಕೌರ್ ಮತ್ತು ಇತರ 25 ಜನರು ಇತ್ತೀಚಿನ ಶಸ್ತ್ರಾಸ್ತ್ರಗಳೊಂದಿಗೆ ‘ಸರ್ವತ್ರ ಸುರಕ್ಷಾ’ ಸಾಹಸ ಪ್ರದರ್ಶನ ನೀಡಿದರು. ‘ನಾರಿ ಶಕ್ತಿ’ ಪ್ರದರ್ಶನದಲ್ಲಿ ಇನ್ಸ್ಪೆಕ್ಟರ್ ಸೆಹನಾಜ್ ಖಾತೂನ್ ಮತ್ತು ಇತರ ದೇಶದ ಒಳನಾಡಿನಲ್ಲಿ ನಿಯೋಜಿಸಲಾದ 13 ಮಹಿಳಾ ಸಿಬ್ಬಂದಿ ಪಾಲ್ಗೊಂಡರು.
#WATCH | Motorcycle display enthralls the guests and audience at #RepublicDay2024 celebrations at Kartavya Path.
The Central Armed Police women personnel are exhibiting their prowess of 'Naari Shakti'. 265 women bikers on motorcycles showcase bravery and valour. pic.twitter.com/SZosIJiEbL
— ANI (@ANI) January 26, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.