ಬೆಂಗಳೂರು: ‘ಪದ್ಮ’ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲೆಮರೆಯ ಕಾಯಿಯಂತಿರುವ ರಾಜ್ಯದ ಎಲ್ಲ ಸಾಧಕರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಅಭಿನಂದಿಸಿದ್ದಾರೆ.
ವಿಶಿಷ್ಟ ಸಾಧನೆ ಮಾಡಿದ ಕರ್ನಾಟಕದ ಮೈಸೂರಿನ ಬುಡಕಟ್ಟು ಕಲ್ಯಾಣಕ್ಕೆ ಶ್ರಮಿಸಿದ ಕಾರ್ಯಕರ್ತ ಸೋಮಣ್ಣ, ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರೇಮಾ ಧನರಾಜ್ ಅವರು ಪದ್ಮಶ್ರೀ ವಿಜೇತರಾಗಿ ಗುರುತಿಸಿ ಸಾಧಕರಾಗಿದ್ದಾರೆ.
ಇದಲ್ಲದೆ, ರಾಜ್ಯದ ರೋಹನ್ ಬೋಪಣ್ಣ-ಕ್ರೀಡೆ, ಅನುಪಮಾ ಹೊಸಕೆರೆ-ಕಲೆ, ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ ಮತ್ತು ಶಿಕ್ಷಣ, ಕೆ.ಎಸ್. ರಾಜಣ್ಣ-ಸಮಾಜಸೇವೆ, ಡಾ.ಸಿ.ಆರ್.ಚಂದ್ರಶೇಖರ್ –ವೈದ್ಯಕೀಯ, ಶಶಿ ಸೋನಿ-ಟ್ರೇಡ್ ಮತ್ತು ಇಂಡಸ್ಟ್ರಿ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರು. ಇವರೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಅಳಿವಿನಂಚಿನ ಅಪರೂಪದ ಭತ್ತದ ತಳಿಗಳ ಬೀಜ ಬಿತ್ತಿ ತಳಿ ಸಂರಕ್ಷಣೆ ಮಾಡುವ ಕಾಸರಗೋಡಿನ ಸತ್ಯನಾರಾಯಣ ಕಿನ್ನಿಂಗಾರ್ ಬೆಳೇರಿ ಅವರಿಗೂ ಅಭಿನಂದನೆಗಳು. ಎಲ್ಲ ಪದ್ಮ ಪುರ ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿ ಪ್ರೇರಣೆ ನೀಡಲಿ ಎಂದು ಹಾರೈಸಿದ್ದಾರೆ.
ಅಲ್ಲದೆ, ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಉದ್ಯಮಿ ಸೀತಾರಾಮ್ ಜಿಂದಾಲ್ ಅವರನ್ನೂ ಅಭಿನಂದಿಸಿದ್ದಾರೆ. ನೈಜ ಸಾಧಕರನ್ನು ಗುರುತಿಸುವ ಕೆಲಸ ಆಗಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.