ನವದೆಹಲಿ: ಇಂದು ಜೈಪುರದಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಆತ್ಮೀಯ ಅಪ್ಪುಗೆಯನ್ನು ವಿನಿಮಯ ಮಾಡಿಕೊಂಡರು. ಮಹಾರಾಜ ಸವಾಯಿ ಜೈ ಸಿಂಗ್ ಅವರು ಜೈಪುರದಲ್ಲಿ ಸ್ಥಾಪಿಸಿದ ಪ್ರಸಿದ್ಧ ಸೌರ ವೀಕ್ಷಣಾಲಯವಾದ ಜಂತರ್ ಮಂತರ್ಗೆ ಭೇಟಿ ನೀಡಿದ ವೇಳೆ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಉಪಸ್ಥಿತರಿದ್ದರು.
ದೆಹಲಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿರುವ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿ ಅವರು ಆತ್ಮೀಯವಾಗಿ ಆಲಿಂಗನ ಹಂಚಿಕೊಂಡಿರುವ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ.
ಭೇಟಿಯ ನಂತರ ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಒಟ್ಟಿಗೆ ಜಂತರ್ ಮಂತರ್ ಪ್ರವಾಸ ಕೈಗೊಂಡರು. ಜಂತರ್ ಮಂತರ್ಗೆ ಭೇಟಿ ನೀಡುವ ಮೊದಲು, ಮ್ಯಾಕ್ರನ್ ಅಂಬರ್ ಕೋಟೆಗೆ ಭೇಟಿ ನೀಡಿದ್ದರು. ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಕೂಡ ಇದ್ದರು. ಈ ವೇಳೆ ಮ್ಯಾಕ್ರೋನ್ ರಾಜಸ್ಥಾನಿ ಪೇಂಟಿಂಗ್ ಕಲೆಯನ್ನು ಶ್ಲಾಘಿಸಿದರು ಮತ್ತು ಕಲಾವಿದರೊಂದಿಗೆ ಸಂವಾದ ನಡೆಸಿದರು.
ಇಂದು ಮುಂಜಾನೆ, ಎಮ್ಯಾನುಯೆಲ್ ಮ್ಯಾಕ್ರನ್ ತನ್ನ ಎರಡು ದಿನಗಳ ಭಾರತ ಪ್ರವಾಸದ ಭಾಗವಾಗಿ ಜೈಪುರಕ್ಕೆ ಆಗಮಿಸಿದರು. ಜೈಶಂಕರ್, ರಾಜಸ್ಥಾನ ಗವರ್ನರ್ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮ್ಯಾಕ್ರನ್ ಅವರನ್ನು ಸ್ವಾಗತಿಸಿದರು.
#WATCH | PM Modi and French President Macron visit Jantar Mantar, the famous solar observatory established by Maharaja Sawai Jai Singh, in Rajasthan's Jaipur pic.twitter.com/n7ZWxCuYtO
— ANI (@ANI) January 25, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.