ನವದೆಹಲಿ: ಯುವಕರ ಸಾಮರ್ಥ್ಯ ಇನ್ನಷ್ಟು ವೃದ್ಧಿಸಲಿ, ಅವರ ಕನಸುಗಳು ಸಾಕಾರಗೊಳ್ಳಲಿ ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿನ ರಾತ್ರಿ ಎನ್ನದೆ ಶ್ರಮಿಸುತ್ತಿದೆ. ನಿಮ್ಮ ಕನಸುಗಳೇ ನನ್ನ ಸಂಕಲ್ಪ ಇದು ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಇಂದು ದೇಶದಾದ್ಯಂತದ ಲಕ್ಷಾಂತರ ಸಂಖ್ಯೆಯ ಯುವ ಮತದಾರರನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಅವರು, ನನ್ನ ಆದ್ಯತೆ ದೇಶದ ಯುವ ಜನತೆ. ನಾವು ಈ ದೇಶದ ಯುವ ಜನತೆಯ ಮೇಲೆ ಸದಾ ವಿಶ್ವಾಸವನ್ನು ಇಟ್ಟಿದ್ದೇವೆ. ಮೈಭಾರತ್ ಸಂಘಟನೆಯೊಂದಿಗೆ ಯುವಕರು ಸೇರಿಕೊಳ್ಳಬೇಕು. ಯುವಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಕಲ್ಪ ಪತ್ರ ಹೇಗಿರಬೇಕು,, ವಿಶೇಷವಾಗಿ ಯುವಕರಿಗೆ ಅದರಲ್ಲಿ ಏನಿರಬೇಕು, ಅದಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀವು ನಮೋ ಆಪ್ ಮೂಲಕ ನನಗೆ ತಲುಪಿಸಬಹುದು ಎಂದರು.
ಸ್ಥಿರ ಸರಕಾರ ಬಂದರೆ ದೇಶ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡು, ದಶಕಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಿ ಮುನ್ನಡೆಯುತ್ತದೆ. ನಮ್ಮ ಸಂಪೂರ್ಣ ಬಹುಮತದ ಸರ್ಕಾರ ಜಮ್ಮು-ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕಿತು. ಒಂದು ಶ್ರೇಣಿ ಒಂದು ಪಿಂಚಣಿ ಜಾರಿಗೊಳಿಸುವ ಮೂಲಕ ಮಾಜಿ ಸೈನಿಕರ ದಶಕಗಳ ಬೇಡಿಕೆಯನ್ನು ಪೂರೈಸಿತು. ನಾರಿ ಶಕ್ತಿ ವಂದನ್ ಅದಿನಿಯಮ ಜಾರಿಗೊಳಿಸುವ ಮೂಲಕ, ತ್ರಿವಳಿ ತಲಾಕ್ ನಿರ್ಮೂಲನೆ ಮಾಡುವ ಮೂಲಕ ಮಹಿಳೆಯರ ಹಿತ ಕಾಪಾಡಿತು. ಹಲವು ವರ್ಷಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತು. ಪರಿಶಿಷ್ಟ ಜಾತಿ/ಪಂಗಡಗಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಬಡಯುವಕರಿಗೆ 10% ಮೀಸಲಾತಿ ನೀಡಿತು. ನಮ್ಮ ಸರ್ಕಾರಕ್ಕೆ ಅಯೋಧ್ಯೆಯಲ್ಲಿ ರಾಮಲನ ಪ್ರಾಣ ಪ್ರತಿಷ್ಠೆಗೆ ಸಾಕ್ಷಿಯಾಗುವ ಅವಕಾಶ ದೊರೆಯಿತು ಎಂದಿದ್ದಾರೆ.
ಯುವಕರ ಒಂದು ಮತ ಮತ್ತು ದೇಶದ ಅಭಿವೃದ್ಧಿಯ ದಿಕ್ಕು ಎರಡೂ ಒಂದಕ್ಕೊಂದು ಬೆಸೆದು ಕೊಂಡಿದೆ. ನಿಮ್ಮ ಒಂದು ಮತ ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡಬಲ್ಲದು. ಭಾರತದಲ್ಲಿ ಸ್ಥಿರ ಮತ್ತು ಸಂಪೂರ್ಣ ಬಹುಮತವುಳ್ಳ ಸರ್ಕಾರವನ್ನು ತರಬಲ್ಲದು. ಭಾರತದ ಸುಧಾರಣೆಯ ಪಯಣಕ್ಕೆ ಹೊಸ ವೇಗ ನೀಡಬಲ್ಲದು, ಡಿಜಿಟಲ್ ಕ್ರಾಂತಿಗೆ ಮತ್ತಷ್ಟು ಹುಮ್ಮಸ್ಸು ತುಂಬಬಲ್ಲದು, ಭಾರತವನ್ನು ಸ್ವಂತ ಬಲದ ಮೇಲೆ ಅಂತರಿಕ್ಷಕ್ಕೆ ತಲುಪಿಸಬಲ್ಲದು, ಭಾರತದಲ್ಲಿ ಮೊದಲ ಪ್ರಯಾಣಿಕ ಯುದ್ಧ ವಿಮಾನವನ್ನು ತಯಾರಿಸಬಲ್ಲದು, ನಿಮ್ಮ ಒಂದು ಮತ ವಿಶ್ವದಲ್ಲೇ ಭಾರತದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.