ನವದೆಹಲಿ: ಭಾರತದಾದ್ಯಂತ ರೈಲ್ವೆ ನಿಲ್ದಾಣಗಳ ಆಕರ್ಷಕ ಚಿತ್ರಗಳನ್ನು ಹಂಚಿಕೊಳ್ಳುವಲ್ಲಿ ರೈಲ್ವೇ ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಸಕ್ರಿಯವಾಗಿ ಬಳಸುತ್ತದೆ ಮತ್ತು ರೈಲ್ವೆಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿರಂತರ ಅಪ್ಡೇಟ್ಗಳನ್ನು ನೀಡುತ್ತಲೇ ಇರುತ್ತದೆ. ಈ ಬಾರಿ, ರೈಲ್ವೆ ಸಚಿವಾಲಯದ ಅಧಿಕೃತ ಎಕ್ಸ್ ಖಾತೆಯು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ನಿರ್ಮಿಸಲಾದ ಗುಜರಾತ್ನ ಔರಂಗ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ವಲ್ಸಾದ್ ಜಿಲ್ಲೆಯ ಔರಂಗ ನದಿಯ ಮೇಲೆ ನದಿ ಸೇತುವೆಯ ನಿರ್ಮಾಣ ಕಾರ್ಯವು ಆಗಸ್ಟ್ 2023 ರಲ್ಲಿ ಪೂರ್ಣಗೊಂಡಿತು.
”ಪ್ರಕೃತಿಯ ಸೌಂದರ್ಯವನ್ನು ತಾಂತ್ರಿಕ ವಿಸ್ಮಯಗಳೊಂದಿಗೆ ಬೆಸೆಯಲಾಗಿದೆ. ಗುಜರಾತ್ನ ವಲ್ಸಾದ್ನಲ್ಲಿರುವ ಔರಂಗ ಸೇತುವೆಯು ಬುಲೆಟ್ಟ್ರೇನ್ನೊಂದಿಗೆ ಪ್ರಯಾಣದ ಭವಿಷ್ಯದ ಹಾದಿಯನ್ನು ಸುಗಮಗೊಳಿಸುತ್ತದೆ” ಎಂದು ರೈಲ್ವೇ ಹಚ್ಚ ಹಸಿರಿನಿಂದ ಆವೃತವಾಗಿರುವ ಸೇತುವೆಯ ಚಿತ್ರ ಹಂಚಿಕೊಂಡು ಒಕ್ಕಣೆ ಬರೆದಿದೆ.
ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಅಹಮದಾಬಾದ್-ಮುಂಬೈ ಹೈ-ಸ್ಪೀಡ್ ರೈಲ್ ಕಾರಿಡಾರ್ ಅನ್ನು ನಿರ್ಮಿಸುವ ಕಾರ್ಯವನ್ನು ವಹಿಸಿಕೊಂಡಿದೆ. ನವೆಂಬರ್ 2021 ರಲ್ಲಿ ಕೆಲಸ ಪ್ರಾರಂಭವಾದಾಗಿನಿಂದ ಮಹತ್ವಾಕಾಂಕ್ಷೆಯ ಯೋಜನೆಯು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಕಾರಿಡಾರ್ನ ಭಾಗವಾಗಿ, ಆರು ನದಿಗಳ ಮೇಲೆ ಸೇತುವೆಗಳನ್ನು ನಿರ್ಮಿಸಲಾಗಿದೆ.
Blending nature's beauty with technological marvels
The Auranga Bridge in Valsad, Gujarat, paves the way for the future of travel with the #BulletTrain pic.twitter.com/jK6j63dnip
— Ministry of Railways (@RailMinIndia) January 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.