ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಇವತ್ತಿನ ಹೇಳಿಕೆ ಅವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಹಿಂದುಳಿದ ವರ್ಗದ ಪ್ರಮುಖರಾಗಿ, ವೈಚಾರಿಕವಾಗಿ ಒಂದಷ್ಟು, ಸಾಹಿತ್ಯಕವಾಗಿ ಒಂದಷ್ಟು ಹಿನ್ನೆಲೆಯಿರುವ ಮೊಯಿಲಿಯವರಿಂದ ಇಂಥ ಕೊಳಕು ಹೇಳಿಕೆಯನ್ನು ಜನರು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದರು.
ಸನಾತನ ಹಿಂದೂ ಧರ್ಮದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಸುಧಾರಣೆಯ ಕ್ರಾಂತಿ ಆಗುತ್ತಿದೆ. ಸಮಾನತೆ, ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದುಗಳು ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ಹಿಂದೂ ಧರ್ಮದ ಸಮಾನತೆಯ ಸಂಕೇತವಾಗಿದೆ ಎಂದು ವಿವರಿಸಿದರು.
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಲರಾಮನ ಪ್ರತಿಷ್ಠೆ ಮಾಡಿದ್ದು, ಇಡೀ ವಿಶ್ವದ ಹಿಂದೂಗಳ ಪಾಲಿಗೆ ಅತ್ಯಂತ ಸಂಭ್ರಮದ ವಿಷಯವಾಗಿದೆ. ಇದನ್ನು ಕಂಡು ವೀರಪ್ಪ ಮೊಯಿಲಿಯವರು ಪ್ರಶಂಸೆ ಮಾಡಬೇಕಿತ್ತು ಎಂದರು.
ಸನಾತನ ಹಿಂದೂ ಧರ್ಮದಲ್ಲಿ ಭಗವಂತನನ್ನು ಅಪ್ಪಿಕೊಳ್ಳಲು, ಅಪ್ಪಿಕೊಳ್ಳಲು, ಆರಾಧಿಸಲು ಅವಕಾಶ ಆಗಿದೆ. ಆದರೆ, ವೀರಪ್ಪ ಮೊಯಿಲಿ ಅವರ ಹತಾಶೆಯ ಈ ಹೇಳಿಕೆಯ ಮೂಲಕ ಅವರ ಘನತೆಯನ್ನು ತಗ್ಗಿಸಿಕೊಂಡಿದ್ದಾರೆ; ಅವರ ಸಂಸ್ಕಾರದಲ್ಲಿ ಕಪ್ಪುಚುಕ್ಕಿಯನ್ನು ಅವರೇ ಬಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.