ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚೀತಾವೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಚೀಆತಾ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳ ನಂತರ ಜ್ವಾಲಾ ಹೆಸರಿನ ಚೀತಾ ಮರಿಗಳಿಗೆ ಜನ್ಮ ನೀಡಿದೆ. 1952 ರಲ್ಲಿ ಭಾರತದಲ್ಲಿ ಚೀತಾಗಳು ನಿರ್ನಾಮವಾಗಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಅವುಗಳನ್ನು ಪುನಃ ಪರಿಚಯಿಸಲಾಯಿತು.
ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಎಕ್ಸ್ನಲ್ಲಿ ಈ ಬಗ್ಗೆ ಘೋಷಣೆ ಮಾಡಿ, ಎಲ್ಲಾ ವನ್ಯಜೀವಿ ಮುಂಚೂಣಿ ಯೋಧರು ಮತ್ತು ವನ್ಯಜೀವಿ ಪ್ರೇಮಿಗಳನ್ನು ಅಭಿನಂದಿಸಿದ್ದಾರೆ.
“ಕುನೊದ ಹೊಸ ಮರಿಗಳು! ಜ್ವಾಲಾ ಎಂಬ ಹೆಸರಿನ ನಮೀಬಿಯಾದ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ನಮೀಬಿಯಾ ಚೀತಾ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳಲ್ಲಿ ಇದು ಬಂದಿದೆ. ದೇಶಾದ್ಯಂತ ಎಲ್ಲಾ ವನ್ಯಜೀವಿ ಮುಂಚೂಣಿ ಯೋಧರು ಮತ್ತು ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆಗಳು. ಭಾರತದ ವನ್ಯಜೀವಿಗಳು ಅಭಿವೃದ್ಧಿ ಹೊಂದಲಿ” ಎಂದು ಯಾದವ್ ಅವರು ‘X’ ಪೋಸ್ಟ್ನಲ್ಲಿ ಹೇಳಿದ್ದಾರೆ.
Kuno’s new cubs!
Namibian Cheetah named Jwala has given birth to three cubs. This comes just weeks after Namibian Cheetah Aasha gave birth to her cubs.
Congratulations to all wildlife frontline warriors and wildlife lovers across the country.
May Bharat’s wildlife thrive… pic.twitter.com/aasusRiXtG
— Bhupender Yadav (@byadavbjp) January 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.