ನವದೆಹಲಿ: ಅಯೋಧ್ಯೆ ದೇವಾಲಯದ ಗರ್ಭಗುಡಿಯೊಳಗಿನ ರಾಮಲಲ್ಲಾ ವಿಗ್ರಹದ ಮೊದಲ ಫೋಟೋ ಹೊರಬಿದ್ದಿದೆ. ಈ ವಿಗ್ರಹ ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ. ದೇವರನ್ನು ಐದು ವರ್ಷದ ಮಗು ನಿಂತಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ. 51 ಇಂಚಿನ ವಿಗ್ರಹವನ್ನು ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಕೆತ್ತಿಸಿದ್ದಾರೆ.
ಗುರುವಾರ ಮಧ್ಯಾಹ್ನ ಹೊಸ ರಾಮನ ವಿಗ್ರಹವನ್ನು ಇರಿಸಲಾಯಿತು, ಜನವರಿ 22 ರಂದು ಮಹಾ ಪ್ರತಿಷ್ಠಾಪನೆ ಸಮಾರಂಭದ ದಿನಗಳ ಮೊದಲು ಮೂರ್ತಿಯನ್ನು ಕೂರಿಸಲಾಗಿದೆ. ಮುಖ ಕಾಣದಂತೆ ಪ್ರಸ್ತುತ ಮುಸುಕು ಹೊದಿಸಲಾಗಿದೆ. ಪ್ರಾಣ ಪ್ರತಿಷ್ಠೆಯ ಬಳಿಕ ವಿಗ್ರಹವನ್ನು ಸಂಪೂರ್ಣವಾಗಿ ನೋಡಬಹುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರ ‘ಪ್ರಾಣ ಪ್ರತಿಷ್ಠಾ’ ಅಥವಾ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಮರುದಿನ ಸಾರ್ವಜನಿಕರಿಗೆ ಮಂದಿರ ತೆರೆಯುವ ನಿರೀಕ್ಷೆಯಿದೆ.
“ಪ್ರಾಣ ಪ್ರತಿಷ್ಠಾ’ ಎಂದರೆ ವಿಗ್ರಹವನ್ನು ದೈವಿಕ ಪ್ರಜ್ಞೆಯಿಂದ ತುಂಬುವುದು. ಪ್ರಾಣ ಪ್ರತಿಷ್ಠೆ ಬಳಿಕವೇ ಮೂರ್ತಿಯೊಂದು ಪೂಜೆಗೆ ಅರ್ಹತೆ ಪಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.