ನವದೆಹಲಿ: ವಿಶ್ವದ ಮಾಜಿ ನಂಬರ್ ಒನ್ ಶೂಟರ್ ಹೀನಾ ಸಿಧು ಅವರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ 8ನೇ ಏಷ್ಯನ್ ಏರ್ ಗನ್ ಚಾಂಪಿಯನ್ಶಿಪ್ನ ವನಿತೆಯರ 10 ಮೀ. ವಿಭಾಗದಲ್ಲಿ ಚಿನ್ನದ ಪಡೆದಿದ್ದಾರೆ. ಈ ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಶ್ವೇತಾ ಸಿಂಗ್ ಅವರು ಬೆಳ್ಳಿ ಹಾಗೂ ಕೋರಿಯಾದ ಸಿಯೋನ್ ಎ. ಕಿಮ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಹೀನಾ ಅವರು ಫೈನಲ್ನಲ್ಲಿ 197.8 ಅಂಕ ಗಳಿಸಿದ್ದರೆ ಶ್ವೇತಾ 197.0 ಅಂಕ ಗಳಿಸಿದರು. ಕೋರಿಯಾದ ಸಿಯೋನ್ ಕಿಮ್ 175.8 ಅಂಕ ಗಳಿಸಿದರು. ಭಾರತದ ಇನ್ನೋರ್ವ ಯುವ ಶೂಟರ್ ಯಶಸ್ವಿನಿ ಸಿಂಗ್ ದೇಶ್ವಾಲ್ ತಮ್ಮ ಮೊದಲ ಫೈನಲ್ ಸ್ಫರ್ಧೆಯಲ್ಲಿ 155.3 ಅಂಕ ಗಳಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಇವರ ಸಾಧನೆಯೊಂದಿಗೆ ಭಾರತ 6 ಚಿನ್ನದ ಪದಕದೊಂದಿಗೆ ಒಟ್ಟು 17 ಪದಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದೆ. ಇರಾನ್ 12 ಪದಕಗಳನ್ನು ಗೆದ್ದು ಎರದನೇ ಸ್ಥಾನ ಪಡೆದರೆ ತೈಪೆ 3ನೇ ಸ್ಥಾನ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.