ನ್ಯೂಯಾರ್ಕ್: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಭವ್ಯ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭಕ್ಕಾಗಿ ಜಗತ್ತಿನಾದ್ಯಂತದ ಭಕ್ತರು ಕಾತುರತೆಯಿಂದ ಎದುರು ನೋಡುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಅಮೆರಿಕಾದಲ್ಲೂ ಹಿಂದೂಗಳು ಈ ಸಂದರ್ಭವನ್ನು ಅದ್ಧೂರಿಯಾಗಿ ಸಂಭ್ರಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಪ್ರದರ್ಶಿಸುವ ದೈತ್ಯ ಜಾಹೀರಾತು ಫಲಕಗಳು ಯುಎಸ್ನಾದ್ಯಂತ ಪ್ರತಿಫಲಿಸಲಿವೆ. ಯುಎಸ್ನ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ದೈತ್ಯ ಬಿಲ್ಬೋರ್ಡ್ಗಳಲ್ಲಿ ರಾಮನ ಪ್ರತಿಷ್ಠೆ ಸಂದರ್ಭದಲ್ಲಿ ಭವ್ಯ ಮಂದಿರದ ಚಿತ್ರ, ಸಂದೇಶಗಳನ್ನು ಪ್ರದರ್ಶಿಸಲಿವೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಯುಎಸ್ ಘಟಕ, ಯುಎಸ್ನಾದ್ಯಂತದ ಹಿಂದೂಗಳ ಸಹಯೋಗದೊಂದಿಗೆ, 10 ರಾಜ್ಯಗಳಲ್ಲಿ 40 ಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ಹಾಕಿದೆ.
ಟೆಕ್ಸಾಸ್, ಇಲಿನಾಯ್ಸ್, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಜಾಹೀರಾತು ಫಲಕಗಳು ಸಿದ್ಧವಾಗಿವೆ. ವಿಎಚ್ಪಿಯ ಅಮೇರಿಕನ್ ಘಟಕದ ಪ್ರಕಾರ, ಜನವರಿ 15 ರ ಸೋಮವಾರದಿಂದ ಪ್ರಾರಂಭವಾಗುವ ಧಾರ್ಮಿಕ ಆಚರಣೆಯಿಂದ ಈ ಬಿಲ್ ಬೋರ್ಡ್ಗಳು ಸಂದೇಶಗಳನ್ನು ಪ್ರದರ್ಶಿಸಲಿವೆ. ಅರಿಜೋನಾ ಮತ್ತು ಮಿಸೌರಿ ರಾಜ್ಯಗಳಲ್ಲೂ ಬಿಲ್ ಬೋರ್ಡ್ ತಲೆ ಎತ್ತಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.