ಮಂಗಳೂರು : ಜಿಲ್ಲಾಡಳಿತ ಟೋಲ್ ಫ್ರಿ ಸಂಖ್ಯೆ 1077 ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಎಡಿಸಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಸಾರ್ವಜನಿಕರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ಹಲವು ನಿಜಾಂಶಗಳು ಹೊರಬಂದಿವೆ.
ಅದರಲ್ಲೂ ಮುಖ್ಯವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಟೋಲ್ ಫ್ರಿ ಸಂಖ್ಯೆ 1077 ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಆರೋಪಗಳನ್ನು ಬೆನ್ನು ಹತ್ತಿದಾಗ ಇವೆಲ್ಲವೂ ನೂರಕ್ಕೆ ನೂರರಷ್ಟು ಸತ್ಯ ಎನ್ನುವ ವಿಚಾರಗಳು ದೃಢಪಡುತ್ತಿದ್ದಂತೆಯೇ ಅಧಿಕಾರಿಗಳಾದ ಕುಮಾರ್ ಅವರು ಈಗ ಎಚ್ಚರಗೊಂಡು ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿರುವ ಮಾಹಿತಿ ಇದೆ.
ಎರಡು ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಹರ್ಷಾ ಗುಪ್ತ ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ಸಮಯದಲ್ಲಿ ಈ ಟೋಲ್ ಫ್ರಿ ಸಂಖ್ಯೆ 1077 ಅನ್ನು ಬಳಕೆ ಮಾಡಲಾಗಿತ್ತು. ಅಲ್ಲಿಯವರೆಗೂ ತುರ್ತು ಸಮಯದಲ್ಲಿ ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಳಕೆಯಾಗುತ್ತಿತ್ತು. ಆದರೆ ಇದು ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಬಳಕೆಯಾಗುತ್ತಿರಲಿಲ್ಲ ಎಂಬ ಆರೊಪವು ಕೇಳಿಬಂದಿತ್ತು.
ಪದೇ ಪದೇ ಗಮನ ಸೆಳೆದ ಸಂಖ್ಯೆ : ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಅವರ ಮುಂದೆ ಇಡುವ ಕೆಲಸವನ್ನು ಈ ಟೋಲ್ ಫ್ರಿ ಸಂಖ್ಯೆಗಳು ಮಾಡುವ ಜವಾಬ್ದಾರಿಯನ್ನು ನೀಡಲಾಗಿದ್ದು. ಜಿಲ್ಲೆಯಲ್ಲಿ ಯಾವುದೇ ಸಮಯದಲ್ಲಿ ಏನೇ ನಡೆದರೂ ಜಿಲ್ಲಾಡಳಿತಕ್ಕೆ ತಿಳಿಸಬೇಕಾದರೆ ಸಂಖ್ಯೆ 1077ಗೆ ಕರೆ ಮಾಡಿದ ಕೂಡಲೇ ಸಮಸ್ಯೆಯನ್ನು ಕೇಳಿ ದೂರನ್ನು ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡುವ ಗುರುತರ ಜವಾಬ್ದಾರಿನೀಡಲಾಗಿದೆ.
ಸದಾಕಾಲ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಸಭೆ, ಸಮಾರಂಭಗಳಲ್ಲಿ ಬ್ಯುಸಿ ಇರುವ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅವರಿಗೆ ಮನವಿ, ಸಮಸ್ಯೆಗಳಿಗೆ ಈ ಟೋಲ್ ಫ್ರಿ ಸಂಖ್ಯೆ ಕಷ್ಟದಲ್ಲಿ ಇರುವ ಮಂದಿಗೆ ವರದಾನವಾಗುವುದರಲ್ಲಿ ಸಂದೇಹವಿಲ್ಲ. ಇದರಿಂದ ದೂರದ ಊರಿನಿಂದ ಜಿಲ್ಲಾಧಿಕಾರಿ ಅಥವಾ ಇತರ ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೆ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಒಂದು ವೇಳೆ ದೂರು ದಾಖಲಿಸಲು ನಿರಾಕರಿಸಿದರೆ ನೇರ ಅಪರ ಜಿಲ್ಲಾಧಿಕಾರಿ ಕುಮಾರ್ ಅವರ ಗಮನಕ್ಕೆ ತರುವ ವ್ಯವಸ್ಥೆಯಾಗಬೇಕು.
ADC :KUMAR , 9480267013
A.B IBRAHIM. 9449225000
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.