ನವದೆಹಲಿ: ಅಯೋಧ್ಯೆಯಲ್ಲಿರುವ ರಾಮಮಂದಿರವು 2,400 ಕೆಜಿ ತೂಕದ ಗಂಟೆಯನ್ನು ಸ್ವೀಕರಿಸಲು ಸಿದ್ಧವಾಗಿದೆ. ಈ ಗಂಟೆಯನ್ನು ‘ಅಷ್ಟಧಾತು’ (ಎಂಟು ಲೋಹಗಳು) ನಿಂದ ಮಾಡಲಾಗಿದೆ ಮತ್ತು ಇದರ ಬೆಲೆ 25 ಲಕ್ಷ ರೂಪಾಯಿಗಳು. ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಲ್ಲಿ ಕುಶಲಕರ್ಮಿಗಳು ಇದನ್ನು ತಯಾರಿಸಿದ್ದಾರೆ.
ಈ ಭಾರೀ ಗಾತ್ರದ ಗಂಟೆಯನ್ನು ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ.
ಸರಿಸುಮಾರು 30 ನುರಿತ ಕುಶಲಕರ್ಮಿಗಳ ತಂಡದಿಂದ ಗಂಟೆ ತಯಾರಿಸಲ್ಪಟ್ಟಿದೆ, ಗಂಟೆ ಎಂಟು ಲೋಹಗಳಿಂದ ಕೂಡಿದೆ. ಅದೆಂದರೆ ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ. ಇದು ದೇಶದ ಅತಿದೊಡ್ಡ ಗಂಟೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.
ಗಂಟೆಯನ್ನು ಸಿಂಗಲ್-ಪೀಸ್ ಕ್ರಾಫ್ಟಿಂಗ್ನಲ್ಲಿ ಮಾಡಿದ್ದು ವಿಶಿಷ್ಟವಾಗಿದೆ, ಎರಡು ಕಿಲೋಮೀಟರ್ ತ್ರಿಜ್ಯದೊಳಗೆ ಪ್ರತಿಧ್ವನಿಯನ್ನು ಇದು ಉಂಟು ಮಾಡುತ್ತದೆ. ಆರು ಅಡಿ ಎತ್ತರ ಮತ್ತು ಐದು ಅಡಿ ಅಗಲವನ್ನು ಇದು ಹೊಂದಿದೆ.
ಲೋಹದ ವ್ಯಾಪಾರಿ ಆದಿತ್ಯ ಮಿತ್ತಲ್ ಮತ್ತು ಪ್ರಶಾಂತ್ ಮಿತ್ತಲ್ ಅವರು ತಮ್ಮ ದಿವಗಂತ ಸಹೋದರ ಮತ್ತು ಜಲೇಸರ್ ನಗರ ಪಂಚಾಯತ್ನ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಆಶಯದಂತೆ ಈ ಗಂಟೆಯನ್ನು ಅಯೋಧ್ಯೆ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ವಿಕಾಸ್ ಮಿತ್ತಲ್ 2022 ರಲ್ಲಿ ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದರು. ಸಾವಿಗೆ ಮುನ್ನ ರಾಮ ಮಂದಿರಕ್ಕೆ ಗಂಟೆ ನೀಡುವ ಆಶಯ ವ್ಯಕ್ತಪಡಿಸಿದ್ದರು.
2400 kg giant bell offered for Ram temple in Ayodhya by a delegation from Etah: Temple trust in statement#RamMandir #Ayodhya #ShriRam pic.twitter.com/QFxZiN81vh
— DD News (@DDNewslive) January 10, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.