ನವದೆಹಲಿ: ಜಮ್ಮು-ಕಾಶ್ಮೀರದ ರಜೌರಿ ಮತ್ತು ಪೂಂಚ್ನಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗೆ ಸಹಾಯ ಮಾಡುವಲ್ಲಿ ಭಾರತದ ವಿರೋಧಿಗಳು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಗುರುವಾರ ಹೇಳಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ನಿರಂತರ ಬೆಂಬಲವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಪಾಂಡೆ, ಪೂಂಚ್ ಮತ್ತು ರಜೌರಿ ಎರಡು ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಕಳವಳದ ಮೂಲ ಎಂದು ಕರೆದಿದ್ದಾರೆ ಮತ್ತು 2017/18 ರವರೆಗೆ ಅಲ್ಲಿ ಶಾಂತಿ ಇತ್ತು ಆದರೆ ಈಗ ಅದು ನಮ್ಮ ವಿರೋಧಿಗಳು ಸಕ್ರಿಯವಾಗಿರುವ ಪ್ರದೇಶವಾಗಿದೆ ಎಂದಿದ್ದಾರೆ.
“ಕಳೆದ ಐದಾರು ತಿಂಗಳುಗಳಲ್ಲಿ, ರಾಜೌರಿ ಮತ್ತು ಪೂಂಚ್ ಎರಡರಲ್ಲೂ ಭಯೋತ್ಪಾದನೆ ಹೆಚ್ಚಾಗಿದೆ ಮತ್ತು ಇದು ನಮಗೆ ಕಳವಳದ ವಿಷಯವಾಗಿದೆ. 2003 ರ ಮೊದಲು ಆ ಪ್ರದೇಶದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆಯಾಗಿತ್ತು ಮತ್ತು 2017/18 ರವರೆಗೆ ಶಾಂತಿ ಮತ್ತು ಸ್ಥಿರತೆ ಇತ್ತು. ಆದರೆ ಈಗ ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುವುದರಿಂದ ನಮ್ಮ ವಿರೋಧಿಗಳು ಆ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ” ಎಂದು ಜನರಲ್ ಹೇಳಿದ್ದಾರೆ.
“ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮತ್ತು ಪ್ರಾಕ್ಸಿ ತಂಝೀಮ್ಗಳನ್ನು (ಪರಿಚಿತ ಭಯೋತ್ಪಾದಕ ಗುಂಪುಗಳ ಪ್ರಾಕ್ಸಿಗಳು) ಪ್ರೋತ್ಸಾಹಿಸುವ ವಿಷಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಪ್ರದೇಶದಲ್ಲಿ 45 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಕಳೆದ ವರ್ಷವಷ್ಟೇ ಐದು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು ಮತ್ತು ಆರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು, ಒಳನಾಡಿನಲ್ಲಿಯೂ ಸಹ ಸುಮಾರು 14 ಭಯೋತ್ಪಾದಕರನ್ನು ಸಂಹರಿಸಲಾಯಿತು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.