ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬದಲಾಗಿದೆ ಮತ್ತು ಭಾರತವನ್ನು ದುರ್ಬಲ ಆರ್ಥಿಕತೆ ಎಂದು ಪರಿಗಣಿಸುತ್ತಿದ್ದ ಚೀನಾದಂತಹ ದೇಶಗಳು ಸಹ ತಮ್ಮ ಗ್ರಹಿಕೆಯನ್ನು ಬದಲಾಯಿಸಿವೆ ಎಂದು ಬ್ರಿಟನ್ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬ್ರಿಟನ್ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಬಗ್ಗೆ ಚೀನಾದ ಗ್ರಹಿಕೆ ತೀವ್ರವಾಗಿ ಬದಲಾಗಿದೆ ಎಂದಿದ್ದಾರೆ.
ಗಾಲ್ವಾನ್ ಬಿಕ್ಕಟ್ಟಿನ ನಂತರ, ಭಾರತವು ಇನ್ನು ಮುಂದೆ ದುರ್ಬಲ ರಾಷ್ಟ್ರವಲ್ಲ ಎಂದು ಚೀನಾ ಒಪ್ಪಿಕೊಂಡಿದೆ ಎಂದು ಸಿಂಗ್ ಹೇಳಿದರು. “ಚೀನಾವನ್ನು ಭಾರತದ ಎದುರಾಳಿ ಎಂದು ಪರಿಗಣಿಸಲಾಗುತ್ತದೆ. ಆದರೆ ನಾವು ಚೀನಾವನ್ನು ನಮ್ಮ ಎದುರಾಳಿ ಎಂದು ಪರಿಗಣಿಸುವುದಿಲ್ಲ, ಬಹುಶಃ ಚೀನಾ ಕೂಡ ಹಾಗೆ ಪರಿಗಣಿಸುತ್ತದೆ. ಆದರೆ, ನಾವು ನಮ್ಮ ನೆರೆಹೊರೆಯವರು ಮತ್ತು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ. 2020 ರಲ್ಲಿ, ಭಾರತ ಮತ್ತು ಚೀನಾ ನಡುವೆ ಮುಖಾಮುಖಿ ನಡೆದಿತ್ತು ಮತ್ತು ನಮ್ಮ ಭದ್ರತಾ ಪಡೆಗಳು ತೋರಿದ ಶೌರ್ಯ, ಬಹುಶಃ ಭಾರತದ ಬಗ್ಗೆ ಚೀನಾದ ದೃಷ್ಟಿಕೋನ ಬದಲಾಗಲು ಇದೇ ಕಾರಣ. ಭಾರತವು ದುರ್ಬಲವಾಗಿಲ್ಲ ಎಂದು ಅವರು ಅರಿತುಕೊಂಡಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.
#WATCH | London, UK: Defence Minister Rajnath Singh says, " China is considered as the opponent of China, we don't consider China as our opponent, maybe China considers so. We don't consider anyone as our opponent…in 2020, a faceoff happened between India and China, and the… pic.twitter.com/2oG9GqTHH0
— ANI (@ANI) January 10, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.