ನವದೆಹಲಿ: ಫೆಬ್ರವರಿ 13 ರಂದು ಅಬುಧಾಬಿಯಲ್ಲಿ ‘ಅಹ್ಲಾನ್ ಮೋದಿ’ ಎಂಬ ಸಮುದಾಯ ಸ್ವಾಗತ ಸಮಾರಂಭ ನಡೆಯಲಿದೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಸಿದ್ಧರಾಗಿದ್ದಾರೆ. ‘ಹಲೋ ಮೋದಿ’ ಅಥವಾ ʼಅಹ್ಲಾನ್ ಮೋದಿʼ ಶೀರ್ಷಿಕೆಯು ಭಾರತೀಯ ಸಮುದಾಯವು ತಮ್ಮ ನಾಯಕನನ್ನು ಸ್ವಾಗತಿಸಲು ಎಷ್ಟೊಂದು ಕಾತುರವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಶೇಖ್ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂ ಈ ಐತಿಹಾಸಿಕ ಸಂದರ್ಭವನ್ನು ಆಯೋಜಿಸಲು ಸಿದ್ಧವಾಗಿದೆ, ಸಂಘಟಕರು ಇಡೀ ಸಭಾಂಗಣ ಭರ್ತಿಯಾಗಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಸಮರ್ಪಿತ ಸ್ವಯಂಸೇವಕರನ್ನು ಒಳಗೊಂಡಿರುವ ಸಮಿತಿಗಳು ʼಅಹ್ಲಾನ್ ಮೋದಿʼ ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ತಡೆರಹಿತ ಮತ್ತು ಸ್ಮರಣೀಯ ಅನುಭವವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.
ಭಾರತೀಯ ಸಮುದಾಯದ ನಾಯಕರಿಂದ ಕಾರ್ಯಕ್ರಮಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜನವರಿ 3 ರಂದು ದುಬೈನ ಇಂಡಿಯಾ ಕ್ಲಬ್ನಲ್ಲಿ ʼಅಹ್ಲಾನ್ ಮೋದಿʼ ಕಾರ್ಯಕ್ರಮಕ್ಕೆ ಪೂರ್ವಭಾವಿ ಬ್ರೀಫಿಂಗ್ ನಡೆದಿದ್ದು, ಇದರಲ್ಲಿ ವಿವಿಧ ಪ್ರದೇಶಗಳು ಮತ್ತು ಸಮುದಾಯಗಳ 350 ಕ್ಕೂ ಹೆಚ್ಚು ಭಾರತೀಯ ಸಮುದಾಯದ ಮುಖಂಡರು ಇದರಲ್ಲಿ ಭಾಗಿಯಾಗಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ‘ಅಹ್ಲಾನ್ ಮೋದಿ’ ಕಾರ್ಯಕ್ರಮವು ವಲಸೆಗಾರರಲ್ಲಿ ಉತ್ಸಾಹ ಮತ್ತು ಏಕತೆಯ ಭಾವವನ್ನು ಪ್ರತಿಬಿಂಬಿಸಿದೆ.
ಇದು 2015 ರ ನಂತರ ಯುಎಇಗೆ ಪ್ರಧಾನಿ ಮೋದಿ ಅವರ ಏಳನೇ ಭೇಟಿಯಾಗಿದೆ, ಅವರು 34 ವರ್ಷಗಳಲ್ಲಿ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಪ್ರತಿಯೊಂದು ಭೇಟಿಯು ಭಾರತ-ಯುಎಇ ಸಂಬಂಧಗಳನ್ನು ಬಲಪಡಿಸಲು, ಪರಸ್ಪರ ತಿಳುವಳಿಕೆಯನ್ನು ಬೆಳೆಸಲು ಮತ್ತು ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಹೆಚ್ಚಿಸಲು ಕೊಡುಗೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.