ನವದೆಹಲಿ: ವರದಿಗಳ ಪ್ರಕಾರ, ಸೋಮಾಲಿ ಕರಾವಳಿಯ ಬಳಿ ನಿನ್ನೆ ಸಂಜೆ ಅಪರಿಚಿತ ದುಷ್ಕರ್ಮಿಗಳು ‘ಎಂವಿ ಲೀಲಾ ನಾರ್ಫೋಕ್’ ಸರಕು ಸಾಗಣೆ ಹಡಗನ್ನು ಅಪಹರಿಸಿದ್ದಾರೆ. ಈ ಹಡಗಿನಲ್ಲಿ 15 ಭಾರತೀಯರು ಇರುವ ಕಾರಣ ಭಾರತೀಯ ನೌಕಾಪಡೆಯು ಕ್ಷಿಪ್ರ ಕಾರ್ಯಾಚರಣೆಗೆ ಧಾವಿಸಿದೆ. ಅಪಹರಣಕ್ಕೀಡಾದ ನೌಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಯುದ್ಧನೌಕೆಯನ್ನು ಕಳುಹಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಶುಕ್ರವಾರ ವರದಿ ಮಾಡಿದ್ದಾರೆ.
15 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ಅಪಹರಣಕ್ಕೊಳಗಾದ ಹಡಗು ಈಗ ಭಾರತೀಯ ನೌಕಾಪಡೆಯ ನಿಕಟ ಮೇಲ್ವಿಚಾರಣೆಯಲ್ಲಿದೆ, ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಸಂವಹನ ಮಾರ್ಗಗಳನ್ನು ಸ್ಥಾಪಿಸಲಾಗಿದೆ.
ಐಎನ್ಎಸ್ ಚೆನ್ನೈ, ಪರಿಸ್ಥಿತಿಯನ್ನು ಪರಿಹರಿಸಲು ಅಪಹರಣಕ್ಕೊಳಗಾದ ಹಡಗಿನತ್ತ ಪಯಣ ಬೆಳೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇನಾ ಮೂಲಗಳ ಪ್ರಕಾರ, ಅಪಹರಣದ ಸುದ್ದಿ ಗುರುವಾರ ಸಂಜೆ ಭಾರತೀಯ ಅಧಿಕಾರಿಗಳಿಗೆ ತಲುಪಿದೆ. ಕ್ಷಿಪ್ರ ಪ್ರತಿಕ್ರಿಯೆಯಲ್ಲಿ, ಭಾರತೀಯ ನೌಕಾಪಡೆಯು ಹಡಗಿನ ಸಹಾಯಕ್ಕಾಗಿ ಮಾರಿಟೈಮ್ ಪೆಟ್ರೋಲ್ ಏರ್ಕ್ರಾಫ್ಟ್ (MPA) ಅನ್ನು ನಿಯೋಜಿಸಿದೆ.
ಈ ಪ್ರದೇಶದಲ್ಲಿ ವಿವಿಧ ಏಜೆನ್ಸಿಗಳು ಮತ್ತು ಕಡಲ ಭದ್ರತಾ ಪಡೆಗಳ (MNF) ನಡುವೆ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತಿದ್ದು, ಒಟ್ಟಾರೆ ಪರಿಸ್ಥಿತಿಯು ನಿಕಟವಾದ ಮೇಲ್ವಿಚಾರಣೆಯಲ್ಲಿದೆ ಎಂದು ಭಾರತೀಯ ನೌಕಾಪಡೆಯು ದೃಢಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.